ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ‘ಸುಪ್ರೀಂ’ಗೆ ಥಾಪರ್‌ ?

ಇದೇ 9ರಂದು ಅಂತಿಮ ಹೆಸರು ಪ್ರಕಟಿಸಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
Last Updated 3 ಜುಲೈ 2018, 20:03 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಭಾರತ ಸಂಜಾತ ಅಮೆರಿಕ ನ್ಯಾಯಾಧೀಶ ಅಮೂಲ್‌ ಥಾಪರ್‌ ಅವರ ಸಂದರ್ಶನವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅಂಥೋನಿ ಕೆನಡಿ (81) ಅವರು ಕಳೆದ ವಾರ ನಿವೃತ್ತಿ ಘೋಷಿಸಿದ್ದು, ಜುಲೈ 31 ಕೆಲಸದ ಕೊನೆಯ ದಿನ.

ಕೆನಡಿ ಅವರ ಸ್ಥಾನಕ್ಕೆ ನೇಮಿಸಲು ಥಾಪರ್‌ ಸೇರಿದಂತೆ ಅರ್ಹ 25 ನ್ಯಾಯಾಧೀಶರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆದರೆ, ಥಾಪರ್‌ ಸೇರಿದಂತೆ ನಾಲ್ವರ ಸಂದರ್ಶನ ಮಾತ್ರ ನಡೆಸಲಾಗಿದೆ.

‘ನಾನು ಇನ್ನೂ ಇಬ್ಬರು ಅಥವಾ ಮೂವರ ಸಂದರ್ಶನ ನಡೆಸಲಿದ್ದೇನೆ. ಬಳಿಕ ಹೊಸ ನ್ಯಾಯಮೂರ್ತಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ಜುಲೈ 9ರಂದು ಹೊಸ ನ್ಯಾಯಮೂರ್ತಿ ಹೆಸರು ಪ್ರಕಟಿಸಲಾಗುವುದು. ಹೊಸ ನ್ಯಾಯಮೂರ್ತಿ ಪ್ರತಿಭಾವಂತ ಮತ್ತು ಅತ್ಯುತ್ತಮ ವ್ಯಕ್ತಿಯಾಗಿರುತ್ತಾರೆ’ ಎಂದು ಟ್ರಂಪ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT