ಶನಿವಾರ, ಡಿಸೆಂಬರ್ 14, 2019
24 °C

ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ:ಮೂವರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಒಕ್ಲಹಾಮದ ಡಂಕನ್‌ ಪ್ರದೇಶದ ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸ್ಟೋರ್‌ ಮುಂಭಾಗದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ  ಶಂಕಿತ ವ್ಯಕ್ತಿಯು ಸಹ ಮೃತಪಟ್ಟಿದ್ದಾನೆ ಎಂದು ಡಂಕನ್‌ ಪೊಲೀಸ್‌ ಮುಖ್ಯಸ್ಥ ಡ್ಯಾನಿ ಫೋರ್ಡ್‌ ತಿಳಿಸಿದ್ದಾರೆ ಎಂದು ಟಿಎನ್‌ಎನ್‌ ಸುದ್ದಿ ವಾಹಿನಿ ವರದಿ ಮಾಡಿದೆ.

ಈ ಪ್ರದೇಶದಲ್ಲಿ ಶಾಲೆಗಳನ್ನು ಕೆಲ ಹೊತ್ತು ಬಂದ್‌ ಮಾಡಲಾಗಿತ್ತು. ಪರಿಸ್ಥಿತಿ ತಿಳಿಯಾದ ನಂತರ ಶಾಲೆಗಳು ಪುನರ್‌ ಆರಂಭಗೊಂಡವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು