ಶನಿವಾರ, ಡಿಸೆಂಬರ್ 14, 2019
21 °C

ಇಸ್ರೇಲ್‌ ಪಡೆಗಳಿಂದ ಪಾಲೆಸ್ತೀನ್‌ ಮೂಲದ ಉಗ್ರ ಸಂಘಟನೆ ಮುಖಂಡನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಲ್‌ ಅವೀವ್: ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಪ್ಯಾಲೆಸ್ತೀನ್‌ ಮೂಲದ ಉಗ್ರ ಸಂಘಟನೆಯ ಮುಖಂಡ ಹತನಾಗಿದ್ದಾನೆ. ಪ್ಯಾಲೆಸ್ತೀನ್ ಮೂಲದ ಭಯೋತ್ಪದಕ ಸಂಘಟನೆಯು ತಮ್ಮ ಪಡೆಗಳ ಮೇಲೆ ರಾಕೆಟ್‌ ದಾಳಿ ನಡೆಸಿದ್ದಕ್ಕೆ ‍ಪ್ರತಿಕಾರವಾಗಿ ಪ್ರತಿದಾಳಿ ನಡೆಸಲಾಗಿತು ಎಂದು ಇಸ್ರೇಲ್‌ ತಿಳಿಸಿದೆ. 

ತಮ್ಮ ಮುಂಚೂಣಿ ನಾಯಕನಾಗಿದ್ದ 42 ವರ್ಷದ ಬಹಾ ಅಬು ಅಲ್‌–ಅಟಾ ಹತ್ಯೆಯನ್ನು ಉಗ್ರ ಸಂಘಟನೆಯ ಸಶಸ್ತ್ರ ವಿಭಾಗವು ಅಧಿಕೃತವಾಗಿ ಘೋಷಿಸಿದೆ. ಅಬು ಅಲ್‌–ಅಟಾನನ್ನು ವಾಯುದಾಳಿ ನಡೆಸಿ ಕೊಂದಿರುವುದಾಗಿ ಇಸ್ರೇಲ್‌ ಸೇನೆಯೂ ದೃಢಪಡಿಸಿದೆ. 

ಗಾಜಾದ ನಗರದ ಸೇಜೀಯಾ ಪ್ರಾಂತ್ಯದಲ್ಲಿ ಇಸ್ರೇಲ್‌ ಪಡೆ ನಡೆಸಿದ ದಾಳಿಯಲ್ಲಿ ಅಬು ಅಲ್‌–ಅಟಾ ಪತ್ನಿಯೂ ಸಹ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗೊಂಡಿರುವ ವರದಿಯಾಗಿದೆ.

ಇಸ್ರೇಲ್‌ ಪಡೆಯು ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿರುವ ತಮ್ಮ ಮತೊಬ್ಬ ನಾಯಕನ ಮನೆಯ ಮೇಲೆಯೂ ದಾಳಿ ನಡೆಸಿದೆ ಎಂದು ಪ್ಯಾಲೆಸ್ತೀನ್‌ ಮೂಲದ ಉಗ್ರ ಸಂಘಟನೆ ತಿಳಿಸಿದೆ.

‘ನಮ್ಮ ಸಂಘಟನೆಯ ಮುಖಂಡ ವಿರೋಚಿತ ಮರಣ ಹೊಂದಿದ್ದಾನೆ. ಇಸ್ರೇಲ್‌ ನಡೆಸಿದ ದಾಳಿಗೆ ಪ್ರತಿಕಾರವಾಗಿ ನಾವು ಯಹೂದಿ ಅಸ್ತಿತ್ವಕ್ಕೆ ಆಘಾತ ನೀಡುವಂತಹ ಪ್ರತಿದಾಳಿ ನಡೆಸಲಿದ್ದೇವೆ’ ಎಂದು ಉಗ್ರ ಸಂಘಟನೆ ತಿಳಿಸಿದೆ. ಆ ಮೂಲಕ ಗಾಜಾಪಟ್ಟಿಯಲ್ಲಿ ಆತಂಕದ ಕಾರ್ಮೋಡ ಮತ್ತೆ ಸುತ್ತಿಕೊಂಡಂತಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು