ಗುರುವಾರ , ಅಕ್ಟೋಬರ್ 17, 2019
24 °C
ವಿದೇಶಿ ಮಹಿಳೆಯರಿಗೆ ವಸ್ತ್ರಸಂಹಿತೆ ತೆರವು

ಸೌದಿ: ಪ್ರವಾಸಿ ವೀಸಾಗೆ ಅನುಮತಿ

Published:
Updated:

ರಿಯಾದ್: ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಪ್ರವಾಸಿ ವೀಸಾಕ್ಕೆ ಅನುಮತಿ ನೀಡಿದ್ದು, ಪ್ರವಾಸದ ಸಂದರ್ಭದಲ್ಲಿ ವಿದೇಶಿ ಮಹಿಳೆಯರಿಗೆ ವಸ್ತ್ರಸಂಹಿತೆಯನ್ನೂ ಸಡಿಲಿಸಿದೆ. 

ಪ್ರವಾಸೋದ್ಯಮ ಮುಖ್ಯಸ್ಥ ಅಹಮ್ಮದ್ ಅಲ್ ಖತೀಬ್‌ ಈ ವಿಷಯವನ್ನು ಪ್ರಕಟಿಸಿದ್ದು, ’ಈ ಮೂಲಕ ನಾವು ಇತಿಹಾಸ
ನಿರ್ಮಿಸುತ್ತಿದ್ದೇವೆ’ ಎಂದಿದ್ದಾರೆ.

ಅಮೆರಿಕ, ಆಸ್ಟ್ರೇಲಿಯ, ಯೂರೋಪ್‌ನ ಕೆಲವು ರಾಷ್ಟ್ರಗಳು ಸೇರಿದಂತೆ 49 ರಾಷ್ಟ್ರಗಳ ಪ್ರಜೆಗಳು ಆನ್‌ಲೈನ್‌ ಇ–ವೀಸಾ ಅಥವಾ ವಿಮಾನನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ವೀಸಾ ಸೌಲಭ್ಯ ಪಡೆಯಲು ಅರ್ಹರು ಎಂದಿದ್ದಾರೆ.

Post Comments (+)