ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ ನಿಷೇಧ: ನಾನು ಜೀವ ಪರ– ಟ್ರಂಪ್‌

Last Updated 19 ಮೇ 2019, 19:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಎಫ್‌ಪಿ): ‘ನಾನು ಜೀವ ಪರ. ಪ್ರತಿಯೊಂದು ಜೀವಿಯೂ ಬದುಕಬೇಕು. ಆದರೆ, ಅತ್ಯಾಚಾರ ಮತ್ತು ಸಂಬಂಧಿಕರಿಂದಲೇ ಅತ್ಯಾಚಾರಕ್ಕೆ ಒಳಗಾದವರಿಗೆ ಗರ್ಭಪಾತ ನಿಷೇಧದಿಂದ ವಿನಾಯಿತಿ ನೀಡಬೇಕು’ ಎಂದು ಡೊನಾಲ್ಡ್‌ ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಎರಡು ರಾಜ್ಯಗಳು ಇತ್ತೀಚೆಗೆ ಗರ್ಭಪಾತಕ್ಕೆ ಕಠಿಣ ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ಟ್ರಂಪ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲೂ ಗರ್ಭಪಾತ ವಿಷಯ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ.

‘ನಾನು ಜೀವ ಪರ. ಆದರೆ, ಮೂರು ವಿನಾಯಿತಿಗಳನ್ನು ನೀಡಬೇಕು. ಅತ್ಯಾಚಾರ, ಸಂಬಂಧಿಕರು ಅಥವಾ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ ಪ್ರಕರಣಗಳಲ್ಲಿ ಹಾಗೂ ತಾಯಿಯ ಜೀವ ಉಳಿಸುವ ಸಂದರ್ಭಗಳಲ್ಲಿ ವಿನಾಯತಿ ನೀಡಬೇಕು. ರೊನಾಲ್ಡ್‌ ರೇಗನ್‌ ಸಹ ಇದೇ ನಿಲುವು ಹೊಂದಿದ್ದರು’ ಎಂದು
ಟ್ರಂಪ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ಗರ್ಭಪಾತವನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನಿಗೆ ಅಲಬಾಮಾ ಗವರ್ನರ್‌ ಬುಧವಾರ ಸಹಿ ಹಾಕಿದ್ದರು. ಮಿಸ್ಸೌರಿಯಲ್ಲೂ ಎಂಟು ವಾರಗಳ ಗರ್ಭಪಾತ ಕಾನೂನುಬಾಹಿರ ಎಂದು ಕಾನೂನು ರೂಪಿಸಲಾಗಿತ್ತು. ಒಹಿಯೊ, ಕೆಂಟುಕಿ, ಲೊವಾ ಸೇರಿದಂತೆ ಹಲವು ರಾಜ್ಯಗಳು ಸಹ ಇದೇ ರೀತಿಯ ಕಾನೂನುಗಳನ್ನು ಈ ಹಿಂದೆಯೇ ರೂಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT