ಸೋಮವಾರ, ಜನವರಿ 20, 2020
19 °C

ಪಾಕಿಸ್ತಾನದ ಭದ್ರತಾ ಸಿಬ್ಬಂದಿಗೆ ಅಮೆರಿಕದಲ್ಲಿ ತರಬೇತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಪಾಕಿಸ್ತಾನದ ಭದ್ರತಾ ಸಿಬ್ಬಂದಿಗೆ ಅಮೆರಿಕದ ಸಂಸ್ಥೆಗಳಲ್ಲಿ ತರಬೇತಿ ನೀಡುವುದನ್ನು ಪುನರಾರಂಭಿಸಲು ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿದೆ. 

ಆದರೆ, ಪಾಕಿಸ್ತಾನಕ್ಕೆ ಸಂಪೂರ್ಣ ಭದ್ರತಾ ನೆರವು ನೀಡದಿರುವ ನಿರ್ಧಾರವನ್ನು ಮುಂದುವರಿಸಲಾಗಿದೆ. ಮಿಲಿಟರಿ ಸಿಬ್ಬಂದಿಗೆ ಸಾಮರ್ಥ್ಯ ವೃದ್ಧಿಸುವ ದೃಷ್ಟಿಯಲ್ಲಿ ತರಬೇತಿಯನ್ನು ಮರು ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಮತ್ತು ಸೆಂಟ್ರಲ್‌ ಏಷ್ಯಾ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಅಲೈಸ್‌ ಜಿ ವೆಲ್ಸ್‌ ಟ್ವೀಟ್‌ ಮಾಡಿದ್ದಾರೆ.

2018ರಲ್ಲಿ ಪಾಕಿಸ್ತಾನ ಸೇನೆಗೆ ರಷ್ಯಾದಲ್ಲಿ ತರಬೇತಿ ಪಡೆಯಲು ಅನುವು ಮಾಡಿಕೊಡುವ ಒಪ್ಪಂದಕ್ಕೆ ಪಾಕಿಸ್ತಾನ ಮತ್ತು ರಷ್ಯಾ ಸಹಿ ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಭದ್ರತಾ ಸಿಬ್ಬಂದಿಗೆ ತರಬೇತಿಗೆ ಅವಕಾಶ ನೀಡುವುದನ್ನು ಅಮೆರಿಕ ರದ್ದು ಮಾಡಿತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು