ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ವಿರುದ್ಧ ಟ್ರಂಪ್‌ ಮತ್ತೆ ಕಿಡಿ: ಕೊರೊನಾಗೆ ‘ಕುಂಗ್‌ ಫ್ಲು’ ಎಂದು ವ್ಯಂಗ್ಯ

Last Updated 21 ಜೂನ್ 2020, 6:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೋವಿಡ್‌–19ಗೆ ‘ಕುಂಗ್ ಫ್ಲು’ ಎಂದು ಕರೆದು ವ್ಯಂಗ್ಯವಾಡಿದ್ದಾರೆ.

ಟುಲ್ಸಾದಲ್ಲಿ ಮೊದಲ ಚುನಾವಣೆ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಜಗತ್ತಿನಾದ್ಯಂತ ಕೋವಿಡ್‌–19 ಹಬ್ಬಲು ಚೀನಾ ಕಾರಣವಾಗಿದೆ. ಕೋವಿಡ್‌–19ಗೆ ಹಲವು ಹೆಸರುಗಳಿವೆ. ಇತಿಹಾಸದಲ್ಲೇ ಈ ಕಾಯಿಲೆಗೆ ಇರುವಷ್ಟು ಹೆಸರುಗಳು ಯಾವುದಕ್ಕೂ ಇಲ್ಲ’ ಎಂದು ಟೀಕಿಸಿದ್ದಾರೆ.

‘ಕೋವಿಡ್‌–19ಗೆ ಕುಂಗ್‌ ಫ್ಲು ಎಂದು ನಾನು ಕರೆಯುತ್ತೇನೆ. ಇದೇ ರೀತಿ 19 ವಿವಿಧ ಹೆಸರುಗಳಿಂದ ಕರೆಯಬಹುದು. ಹಲವರು ಇದನ್ನು ವೈರಸ್‌ ಎಂದು ಕರೆಯುತ್ತಾರೆ. ಇನ್ನು ಹಲವರು ಫ್ಲು ಎಂದು ಕರೆಯುತ್ತಾರೆ. ಈ ರೀತಿ ಕರೆಯುವುದರಿಂದ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ’ ಎಂದಿದ್ದಾರೆ.

ವೈರಸ್‌ ಕುರಿತ ವಿವರಗಳನ್ನು ಚೀನಾ ಮುಚ್ಚಿಟ್ಟಿದೆ ಎಂದು ಟ್ರಂಪ್‌ ಹಲವು ಬಾರಿ ದೂರಿದ್ದರು. ವುಹಾನ್‌ನಲ್ಲಿ ಈ ವೈರಸ್‌ ಮೊದಲು ಕಾಣಿಸಿಕೊಂಡಿದ್ದರಿಂದ ಇದನ್ನು ‘ವುಹಾನ್‌ ವೈರಸ್‌’ ಎಂದು ಅಮೆರಿಕ ಕರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT