ಭಾನುವಾರ, ಅಕ್ಟೋಬರ್ 20, 2019
27 °C

ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸಾಕ್ಷ್ಯ ನುಡಿದ ಮಾಜಿ ರಾಯಭಾರಿ

Published:
Updated:

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ತಮ್ಮನ್ನು ಹುದ್ದೆಯಿಂದ ಕಿತ್ತು ಹಾಕುವಂತೆ ಹಾಗೂ ದೇಶದಿಂದಲೇ ಓಡಿಸುವಂತೆ ಉಕ್ರೇನ್‌ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಉಕ್ರೇನ್‌ನಲ್ಲಿನ ಅಮೆರಿಕದ ಮಾಜಿ ರಾಯಭಾರಿ ಮೇರಿ ಯೊವಾನೊವಿಚ್‌ ಹೇಳಿದ್ದಾರೆ. 

ವಾಗ್ದಂಡನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮುಂದೆ ಹಾಜರಾದಾಗ ಅವರು ಈ ವಿಷಯ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಅನಿಲ ಕಂಪನಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ ಮತ್ತು ಅವರ ಮಗ ಹಂಟರ್‌ ವಿರುದ್ಧ ಆಧಾರವಿಲ್ಲದ ಆರೋಪ ಮಾಡಿದ್ದು, ತನಿಖೆ ಮಾಡುವಂತೆ ಟ್ರಂಪ್‌ ಅವರ ವೈಯಕ್ತಿಕ ಕಾನೂನು ಸಲಹೆಗಾರ ರೂಡಿ ಗಿಲಾನಿ ಅವರು, ಉಕ್ರೇನ್‌ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಡೆಮಾಕ್ರಟಿಕ್‌ ಪಕ್ಷ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಲು ಕರೆ ನೀಡಿದೆ. 

ವಾಗ್ದಂಡನೆ ಕುರಿತ ತನಿಖೆಯ ಭಾಗವಾಗಿ ಯೊವಾನೊವಿಚ್‌ ಅವರು ಸುಮಾರು 9 ಗಂಟೆಗಳ ಕಾಲ ಸಾಕ್ಷ್ಯ ನುಡಿದರು. ತನಿಖೆ ಸಂದರ್ಭದಲ್ಲಿ ಉತ್ತರಿಸಲು ಅವರು ಮಾಡಿಕೊಂಡಿದ್ದ ಟಿಪ್ಪಣಿ ‘ದ ಅಸೋಸಿಯೇಟ್ಸ್‌ ಪ್ರೆಸ್‌’ಗೆ ಲಭ್ಯವಾಗಿದೆ. ಆದರೆ ಅವರು ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಲಿಲ್ಲ.

Post Comments (+)