ಶುಕ್ರವಾರ, ಫೆಬ್ರವರಿ 21, 2020
24 °C

24ರಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೇ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ವೇತ ಭವನ ಮಂಗಳವಾರ ಹೇಳಿದೆ.

ಟ್ರಂಪ್‌ ಮತ್ತು ಭಾರತದ ಪ್ರಧಾನಿ ಮೋದಿ ಅವರ ಈ ಭೇಟಿಯಿಂದ ಉಭಯ ದೇಶಗಳ ಸಹಭಾಗಿತ್ವ ಕಾರ್ಯತಂತ್ರಗಳು ಮತ್ತಷ್ಟು ಬಲಗೊಳ್ಳಲಿದೆ ಎಂದು ಅದು ಹೇಳಿದೆ.

‘ಟ್ರಂಪ್‌ ಅವರ ಭಾರತ ‍ಪ್ರವಾಸ ಕುರಿತು ಇಬ್ಬರೂ ನಾಯಕರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಸಹಭಾಗಿತ್ವ ಬಲಗೊಳ್ಳುವ ಕುರಿತು ಮಾತನಾಡಿದ್ದಾರೆ’ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಸ್ಟೀಫನ್‌ ಗ್ರಿಶ್ಮ್‌ ಹೇಳಿದ್ದಾರೆ.

ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ ಜೊತೆಗೆ ಭಾರತಕ್ಕೆ ಭೇಟಿ ನೀಡಲಿರುವ ಟ್ರಂಪ್‌ ಪ್ರವಾಸದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ ಚಳವಳಿ ಹಾಗೂ ಮಹಾತ್ಮ ಗಾಂಧಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮೋದಿ ಅವರ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.

ಮತ್ತಷ್ಟು ಬಲ (ನವದೆಹಲಿ ವರದಿ): ಡೊನಾಲ್ಡ್‌ ಟ್ರಂಪ್ ಅವರ ಭಾರತ ಭೇಟಿಯನ್ನು ಸ್ವಾಗತಿಸಿರುವ ಭಾರತ, ಇದು ಉಭಯ ದೇಶಗಳ ಸಹಭಾಗಿತ್ವ ಕಾರ್ಯತಂತ್ರವನ್ನು ಬಲಗೊಳಿಸಲಿದೆ ಎಂದು ಹೇಳಿದೆ.

ಟ್ರಂಪ್‌ ಅವರು ತಮ್ಮ ಭೇಟಿಯ ವೇಳೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು