ಸಮೀಕ್ಷೆ: ಟ್ರಂಪ್ ಆಡಳಿತ ಶೇ.60ರಷ್ಟು ಜನರಿಗೆ ಇಷ್ಟವಿಲ್ಲ

7

ಸಮೀಕ್ಷೆ: ಟ್ರಂಪ್ ಆಡಳಿತ ಶೇ.60ರಷ್ಟು ಜನರಿಗೆ ಇಷ್ಟವಿಲ್ಲ

Published:
Updated:
Deccan Herald

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ ವೈಖರಿ ಇಷ್ಟವಿಲ್ಲ ಎಂದು ಶೇ 60ರಷ್ಟು ಅಮೆರಿಕನ್ನರು ವಾಷಿಂಗ್ಟನ್‌ ಪೋಸ್ಟ್ ಮತ್ತು ಎಬಿಸಿ ನ್ಯೂಸ್‌ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

1,003 ಜನರನ್ನು ಆಗಸ್ಟ್ 26 ರಿಂದ 29ರವರೆಗೆ ನಡೆದ ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಶುಕ್ರವಾರ ಇದರ ವರದಿ ಪ್ರಕಟವಾಗಿದೆ. ‌ಸುಮಾರು ಅರ್ಧದಷ್ಟು ಜನ ಹೀನಾಯ ಆಡಳಿತ ಎಂದು ಜರಿದಿದ್ದಾರೆ. ಶೇ 36ರಷ್ಟು ಜನರು  ಟ್ರಂಪ್ ಆಡಳಿತವನ್ನು ಒಪ್ಪಿಕೊಂಡಿದ್ದಾರೆ.

ಅಭಿಪ್ರಾಯ ವ್ಯಕ್ತಪಡಿಸಿರುವ ಶೇ 49ರಷ್ಟು ಜನರು ‘ಟ್ರಂಪ್ ವಿರುದ್ಧ ಕಾಂಗ್ರೆಸ್‌ ವಾಗ್ದಂಡನೆ ಪ್ರಕ್ರಿಯೆಗಳನ್ನು ಹೂಡಬೇಕು’ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ಸಂಸ್ಥೆ ಏಪ್ರಿಲ್‌ನಲ್ಲಿ ಸಂಗ್ರಹಿಸಿದ್ದ ಅಭಿಪ್ರಾಯದಲ್ಲಿ ಶೇ 40ರಷ್ಟು ಜನರು ಟ್ರಂಪ್ ಆಡಳಿತ ಒಪ್ಪಿಕೊಂಡಿದ್ದು, ಶೇ 56ರಷ್ಟು ಜನ ಅಸಮ್ಮತಿ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !