ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣುಬಾಂಬ್‌ ಬಳಕೆ ಸಾಧ್ಯತೆವರದಿ ಅಲ್ಲಗಳೆದ ಟ್ರಂಪ್‌

Last Updated 26 ಆಗಸ್ಟ್ 2019, 17:54 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚಂಡಮಾರುತ ಅಪ್ಪಳಿಸುವ ಮೊದಲೇ ದುರ್ಬಲಗೊಳಿಸಲು ಅಣುಶಕ್ತಿ ಬಾಂಬ್‌ ಪ್ರಯೋಗಿಸುವ ಸಾಧ್ಯತೆ ಪರಿಶೀಲಿಸಲು ನಾನು ಸಲಹೆ ನೀಡಿದ್ದೇನೆ ಎಂಬ‘ಆಕ್ಸಿಯೊ’ ವೆಬ್‌ಸೈಟ್‌ ವರದಿ ‘ಅಸಂಬದ್ಧ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಳ್ಳಿಹಾಕಿದ್ದಾರೆ.

ಚಂಡಮಾರುತ ಕುರಿತಾದ ಚರ್ಚೆಯಲ್ಲಿ ಈ ಸಲಹೆಯನ್ನು ನೀಡಿರುವ ಟ್ರಂಪ್‌, ‘ಆಫ್ರಿಕಾ ಕಡಲತೀರದಲ್ಲಿ ಚಂಡಮಾರುತ ರೂಪುತಳೆಯದಂತೆ ಅದರ ಕೇಂದ್ರ ಭಾಗದಲ್ಲಿ ಅಣುಬಾಂಬ್ ಪ್ರಯೋಗಿಸಿ ನಿಷ್ಕ್ರಿಯಗೊಳಿಸುವುದು ಸಾಧ್ಯವೆ? ಎಂದು ಕೇಳಿದ್ದರು’ ಎಂದು ಆಕ್ಸಿಯೊ ವರದಿ ಮಾಡಿತ್ತು.

‘ಆ ಸಭೆಯಲ್ಲಿ ಭಾಗವಹಿಸಿದ್ದವರು ಅಧ್ಯಕ್ಷರ ಮಾತಿನ ನಂತರ ‘ಇಂಥ ಕ್ರಮದಿಂದ ಏನು ಮಾಡಲು ಸಾಧ್ಯ?’ ಎಂದು ಚಿಂತಿಸಿ ಸಭೆಯಿಂದ ಹೊರನಡೆದರು’ ಎಂದು ವರದಿ ಉಲ್ಲೇಖಿಸಿತ್ತು.

ಈ ವರದಿಯನ್ನು ಅಲ್ಲಗಳೆದಿರುವ ಅಧ್ಯಕ್ಷ ಟ್ರಂಪ್, ‘ನಾನು ಹಾಗೆ ಹೇಳಿಯೇ ಇಲ್ಲ. ಇದು, ಇನ್ನೊಂದು ಸುಳ್ಳು ಸುದ್ದಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಈ ಕುರಿತು ಪ್ರತಿಕ್ರಿಯಿಸಲು ಶ್ವೇತಭವನ ನಿರಾಕರಿಸಿತ್ತು. ಆದರೆ, ಹಿರಿಯ ಅಧಿಕಾರಿಯೊಬ್ಬರು, ಟ್ರಂಪ್‌ ಅವರ ಮಾತಿನಲ್ಲಿ ತಪ್ಪೇನಿಲ್ಲ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT