ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವಿಎಫ್‌ನಿಂದ ಚೀತಾ ಮರಿಗಳ ಜನನ

Last Updated 25 ಫೆಬ್ರುವರಿ 2020, 19:22 IST
ಅಕ್ಷರ ಗಾತ್ರ

ಪಾವೆಲ್: ಅಮೆರಿಕದ ಒಹಾಯೊದಲ್ಲಿರುವ ಕೊಲಂಬಸ್ ಮೃಗಾಲಯದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಐವಿಎಫ್‌ ತಂತ್ರಜ್ಞಾನದ ಮೂಲಕ ಎರಡು ಚೀತಾ ಮರಿಗಳು ಜನಿಸಿವೆ.

‘3 ವರ್ಷದ ಚೀತಾ ಇಝ್ಝಿ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಗೆ ಬುಧವಾರ (ಫೆ.19) ಜನ್ಮ ನೀಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘6 ವರ್ಷದ ಚೀತಾ ಕಿಬಿಬಿ ಈವರೆಗೆ ಮರಿಗಳಿಗೆ ಜನ್ಮ ನೀಡಿರಲಿಲ್ಲ. ಸಹಜವಾಗಿ ಗರ್ಭ ಧರಿಸಲು ಕಿಬಿಬಿಗೆ ಸಾಕಷ್ಟು ವಯಸ್ಸಾಗಿರುವುದರಿಂದ, ಐವಿಎಫ್‌ ತಂತ್ರಜ್ಞಾನ ಬಳಸಿ ನ.21ರಂದು ಇಝ್ಝಿಗೆ ಭ್ರೂಣ ವರ್ಗಾಯಿಸಲಾಯಿತು. ಅದಾದ ಒಂದು ತಿಂಗಳ ಬಳಿಕ ಇಝ್ಝಿ ಗರ್ಭ ಧರಿಸಿರುವುದು ದೃಢಪಟ್ಟಿತು‘ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಈ ಮೊದಲು ವಿಜ್ಞಾನಿಗಳು ಮೂರು ಬಾರಿ ಐವಿಎಫ್‌ ಮೂಲಕ ಮರಿಗಳ ಸೃಷ್ಟಿಗೆ ಯತ್ನಿಸಿದ್ದರು. ಆದರೆ ಇದೇ ಮೊದಲಿಗೆ ಅವರು ಯಶಸ್ವಿಯಾಗಿದ್ದಾರೆ’ ಎಂದು ಮೃಗಾಲಯದ ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT