ಉ.ಕೊರಿಯಾ ಖಂಡನೆ

7

ಉ.ಕೊರಿಯಾ ಖಂಡನೆ

Published:
Updated:

ಸೋಲ್ (ರಾಯಿಟರ್ಸ್): ಅಮೆರಿಕ ತನ್ನ ಮೇಲೆ ವಿಧಿಸುತ್ತಿರುವ ದಿಗ್ಬಂಧನವನ್ನು ಖಂಡಿಸಿರುವ ಉತ್ತರ ಕೊರಿಯಾ, ಇಂತಹ ಒತ್ತಡದ ತಂತ್ರಗಳಿಂದ ಏನೂ ಪ್ರಯೋಜನವಿಲ್ಲ ಎಂದು ತಿರುಗೇಟು ನೀಡಿದೆ.

ಮಾನವ ಹಕ್ಕುಗಳ ದುರ್ಬಳಕೆ ಆರೋಪದ ಮೇಲೆ, ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ ಅವರ ಸಹಾಯಕ ಸೇರಿದಂತೆ ಆ ದೇಶದ ಮೂವರು ಅಧಿಕಾರಿಗಳ ವಿರುದ್ಧ ಅಮೆರಿಕ ಸೋಮವಾರ ದಿಗ್ಬಂಧನ ಹೇರಿರುವುದಕ್ಕೆ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.

ಹೆಚ್ಚು ಹೆಚ್ಚು ನಿರ್ಬಂಧಗಳನ್ನು ಹೇರಿ ಒತ್ತಡ ಹಾಕಿದರೆ ನಾವು ಅಣ್ವಸ್ತ್ರ ತ್ಯಜಿಸುತ್ತೇವೆ ಎಂದು ಅಮೆರಿಕದ ಆಡಳಿತ ಭಾವಿಸಿದ್ದರೆ ಅದು ಶುದ್ಧ ತಪ್ಪು ಲೆಕ್ಕಾಚಾರ; ಇಂತಹ ಕ್ರಮಗಳು ಕೊರಿಯಾ ಪರ್ಯಾಯ ದ್ವೀಪದಲ್ಲಿ ನಿಶ್ಶಸ್ತ್ರೀಕರಣದ ಮಾರ್ಗಗಳನ್ನು ಶಾಶ್ವತವಾಗಿ ಮುಚ್ಚುತ್ತವೆ ಎಂದು ಹೇಳಿಕೆ ಎಚ್ಚರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !