ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಪ್ರಮಾಣದಲ್ಲಿ ಮನೆ ಹಂಚಿಕೆ: ಖಂಡ್ರೆ

ಖಾನಾಪುರ: ₹2.5 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
Last Updated 27 ಮಾರ್ಚ್ 2018, 5:46 IST
ಅಕ್ಷರ ಗಾತ್ರ

ಭಾಲ್ಕಿ: ‘ಸೂರು ಇಲ್ಲದವರಿಗೆ ವಿವಿಧ ವಸತಿ ಯೋಜನೆ ಅಡಿ ತಾಲ್ಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಮನೆ ಹಂಚಿಕೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಭಾನುವಾರ 2017ನೇ ಸಾಲಿನ ಎಚ್‌ಕೆಆರ್‌ಡಿಬಿ, ಮುಖ್ಯಮಂತ್ರಿಗಳ ಮಾದರಿ ಗ್ರಾಮ ವಿಕಾಸ, ವಿಶೇಷ ಘಟಕ ಯೋಜನೆ ಸೇರಿದಂತೆ ನಾನಾ ಯೋಜನೆಯಡಿ ಒಟ್ಟು ₹2.5 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘10 ವರ್ಷಗಳಿಂದ ತಾಲ್ಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ’ ಎಂದರು.

ನಾನಾ ಯೋಜನೆಯಡಿ ಚಾಲನೆ ನೀಡಿದ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿದರು.

ಮಳಚಾಪುರ ಸಿದ್ಧಾರೂಢ ಆಶ್ರಮದ ಸದ್ರೂಪಾನಂದ ಸ್ವಾಮೀಜಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತರಾವ ಚವಾಣ್‌, ಕೆಪಿಸಿಸಿ ಹಿಂದುಳಿದ ವರ್ಗದ ವಿಭಾಗದ ಪ್ರಧಾನ ಕಾರ್ಯದರ್ಶಿ ಸಂತೋಷ ಬಿ.ಜಿ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ಗ್ರಾ.ಪಂ ಅಧ್ಯಕ್ಷೆ ಚಿತ್ರಮ್ಮ, ಉಪಾಧ್ಯಕ್ಷ ಧನರಾಜ ಪಾಟೀಲ, ಜ್ಯಾಂತಿ ಗ್ರಾ.ಪಂ ಅಧ್ಯಕ್ಷ ರವೀಂದ್ರ ಪಾಟೀಲ, ಪ್ರಮುಖರಾದ ವಿದ್ಯಾಸಾಗರ ಪಾಟೀಲ, ಪಂಡರಿನಾಥ ಪಾಟೀಲ, ರಾಜಕುಮಾರ ಪಾಟೀಲ, ಬಾಬುರಾವ ಗುಮ್ಮೆ, ಶಾಮರಾವ್‌ ಪಾಟೀಲ, ಎಪಿಎಂಸಿ ಹಂಗಾಮಿ ಅಧ್ಯಕ್ಷ ಭವರಾವ್‌, ಸದಸ್ಯ ಬಾಬುರಾವ್‌ ಪಾಟೀಲ, ಪ್ರಭು ಪಾಟೀಲ, ವಿಶ್ವನಾಥ ಗುಮ್ಮೆ, ಶಿವರಾಜ ಚಿಟುಗುಪ್ಪ, ಶಾಂತಕುಮಾರ ಪಾಟೀಲ, ಅಮರೇಶ್ವರ ಪಾಟೀಲ, ಮಾಣಿಕರಾವ್‌ ಪಾಟೀಲ, ಮಸ್ತಾನ್‌ ಮುಲ್ಲಾ, ನಸೀರ್, ನಸಿಮೋದ್ದಿನ್, ಝಾಂಗೀರ್, ತುಕಾರಾಮ, ಶಿವರಾಜ, ಸಿದ್ದು, ಚಂದ್ರಪ್ಪ, ಕೆಆರ್‌ಡಿಐಎಲ್‌ನ ಅಧಿಕಾರಿ ಬಿ.ಎಸ್.ಪಾಟೀಲ, ಶ್ರೀನಿವಾಸ ಪೊದ್ದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT