ಲಂಡನ್/ನ್ಯೂಯಾರ್ಕ್: ಬ್ರಿಟನ್‌ನಲ್ಲಿರುವ ಭಾರತದ ವೈದ್ಯರು ಮತ್ತು ವಿವಿಧ ರಾಷ್ಟ್ರಗಳ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಯ ವೀಸಾ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿರುವುದಾಗಿ ಸರ್ಕಾರ ಘೋಷಿಸಿದೆ.
ಇದೇ ಅಕ್ಟೋಬರ್‌ನಲ್ಲಿ ವೈದ್ಯರುಗಳ ವೀಸಾ ಅವಧಿ ಮುಕ್ತಾಯವಾಗಬೇಕಿತ್ತು. ಬ್ರಿಟನ್‌ನಲ್ಲಿ ಬುಧವಾರ 563 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇಲ್ಲಿ 13 ವರ್ಷದ ಬಾಲಕ ಕೋವಿಡ್‌ಗೆ ಬಲಿಯಾಗಿದ್ದು ತೀವ್ರ ಉಸಿರಾಟದ ತೊಂದರೆ ಅನುಭವಿಸಿದ ಈತನನ್ನು ಕಿಂಗ್ಸ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ಬಳಿಕ ಬಾಲಕನಲ್ಲಿ ಕೋವಿಡ್–19 ಇರುವುದು ದೃಢಪಟ್ಟಿತ್ತು.
ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತೆ, ವೈರಾಣುಗಳ ಅಧ್ಯಯನ ವಿಜ್ಞಾನಿ ಗೀತಾ ರಾಮ್‌ಜೀ(50) ಕೋವಿಡ್–19ಗೆ ಬಲಿಯಾಗಿದ್ದಾರೆ. ಈವರೆಗೆ ಇಲ್ಲಿ ಕೋವಿಡ್‌ಗೆ 5 ಜನರು ಮೃತಪಟ್ಟಿದ್ದಾರೆ.
4 ಸಾವಿರಕ್ಕೂ ಹೆಚ್ಚು ಜನರ ಸಾವು
ಕೋವಿಡ್‌ನಿಂದಾಗಿ ಅಮೆರಿಕದಲ್ಲಿ 4,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 2001ರ ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದ ಮೇಲೆ ನಡೆದ ಅಲ್ ಖೈದಾ ಉಗ್ರರು ನಡೆಸಿದ ದಾಳಿ ಸಂದರ್ಭದಲ್ಲಿ ಮೃತಪಟ್ಟವರ ಸಂಖ್ಯೆಗಿಂತ ಹೆಚ್ಚು ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.
‘ಮುಂದಿನ ಎರಡು ವಾರಗಳ ಅವಧಿ ನಮ್ಮೆಲ್ಲರ ಪಾಲಿಗೆ ಕಠಿಣ ಮತ್ತು ನೋವಿನಿಂದ ಕೂಡಿರಲಿದ್ದು, ಸಂಕಷ್ಟದ ದಿನಗಳಿಗೆ ಎಲ್ಲರೂ ಸಿದ್ಧರಾಗಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೋಂಕಿನಿಂದ ಯುರೋಪ್‌ನಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 30 ಸಾವಿರ ದಾಟಿತು. ಎರಡನೇ ಜಾಗತಿಕ ಯುದ್ಧದ ನಂತರ ಮನುಕುಲಕ್ಕೆ ಒದಗಿದ ಮಹಾವಿಪತ್ತು ಇದಾಗಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.