ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬ್ರಿಟನ್ ಪ್ರಧಾನಿ ತೆರೆಸಾ ಮೇ

Last Updated 24 ಮೇ 2019, 11:36 IST
ಅಕ್ಷರ ಗಾತ್ರ

ಲಂಡನ್: ಐರೋಪ್ಯಒಕ್ಕೂಟದಿಂದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಅನುಮೋದನೆ ಸಿಗದೆ ಸೋಲು ಅನುಭವಿಸಿದ್ದರ ಹೊಣೆ ಹೊತ್ತು ಬ್ರಿಟನ್ ಪ್ರಧಾನಿ ತೆರೆಸಾ ಮೇ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ತಮ್ಮ ಕನ್ಸರ್ವೇಟಿವ್ ಪಕ್ಷದ ಒತ್ತಡಕ್ಕೆ ಮಣಿದು ತೆರೆಸಾ ಮೇ ಈ ನಿರ್ಧಾರ ಕೈಗೊಂಡಿದ್ದು, ಜೂನ್ 7ರಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಪಕ್ಷ ಬೇರೊಬ್ಬ ಪ್ರಧಾನಿಯನ್ನು ಆಯ್ಕೆ ಮಾಡುವವರೆಗೆ ಇವರು ಪ್ರಧಾನಿ ಕಾರ್ಯ ನಿರ್ವಹಿಸಲಿದ್ದಾರೆ.

ಬ್ರೆಕ್ಸಿಟ್‌ ಒಪ್ಪಂದವು ಸಂಸತ್ತಿನಲ್ಲಿ ಎರಡು ಬಾರಿ ಮಂಡನೆಯಾಗಿ ಸೋಲುಕಂಡಿದೆ. ಮತ್ತೊಂದು ಬಾರಿ ಈ ಒಪ್ಪಂದವನ್ನು ಮತಕ್ಕೆ ಹಾಕುವಂತೆ ತೆರೆಸಾ ಮಾಡಿದ್ದ ಮನವಿಯನ್ನು ಸ್ಪೀಕರ್‌ ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT