ಹಡಗಿನಿಂದ ಆಯತಪ್ಪಿ ಬಿದ್ದು ಸಮುದ್ರದಲ್ಲಿ ರಾತ್ರಿಯ 10 ಗಂಟೆ ಕಳೆದ ಮಹಿಳೆ

7

ಹಡಗಿನಿಂದ ಆಯತಪ್ಪಿ ಬಿದ್ದು ಸಮುದ್ರದಲ್ಲಿ ರಾತ್ರಿಯ 10 ಗಂಟೆ ಕಳೆದ ಮಹಿಳೆ

Published:
Updated:
Deccan Herald

ಜಗ್ರೆಬ್(ಕ್ರೊವೇಷಿಯಾ: ನಾರ್ವೆಯ ಸ್ಟಾರ್ ಹಡಗಿನಿಂದ ಅಯತಪ್ಪಿ ಏಡ್ರಿಯಾಟಿಕ್ ಸಮುದ್ರಕ್ಕೆ ಬಿದ್ದಿದ್ದ ಬ್ರಿಟಿಷ್ ಪ್ರವಾಸಿ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಅವರು ಇಡೀ ರಾತ್ರಿ ಸಮುದ್ರದಲ್ಲಿ ಕಳೆದಿದ್ದಾರೆ.

ಕ್ರೊವೇಷಿಯಾದ ಕರಾವಳಿ ಕಾವಲು ಪಡೆ ಸಿಬ್ಬಂದಿಯೊಬ್ಬರು ಕೇ ಲಾಂಗ್‌ಸ್ಟಫ್ ಎಂಬ ಮಹಿಳೆಯನ್ನು ಭಾನುವಾರ ಪತ್ತೆಹಚ್ಚಿದ್ದಾರೆ. ‘ನಾನು ಬದುಕಿದ್ದೇನೆ, ನಾನು ಅದೃಷ್ಟವಂತಳು’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 

‘ಘಟನೆ ನಡೆದ 10 ಗಂಟೆಗಳ ಬಳಿಕ ಮಹಿಳೆಯನ್ನು ಪವಾಡಸದೃಶ ರೀತಿಯಲ್ಲಿ ರಕ್ಷಣೆ ಮಾಡಿದ ಕ್ಷಣಗಳನ್ನು ಮರೆಯಲಾಗದು’ ಎಂದು ಹಡಗಿನ ಕ್ಯಾಪ್ಟನ್ ಲೊವ್ರೊ ಒರೆಸ್ಕೊವಿಕ್ ಸಂತಸ ವ್ಯಕ್ತಪಡಿಸಿದ್ದಾರೆ. 

ಕೇ ಅವರ ಆರೋಗ್ಯ ಸ್ಥಿರವಾಗಿದ್ದು, ಕ್ರೊವೇಷಿಯಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಹಡಗಿನಿಂದ ನೀರಿಗೆ ಬಿದ್ದಿದ್ದು ಹೇಗೆ ಎಂಬುದಕ್ಕೆ ಪ್ರತಿಕ್ರಿಯಿಸಲು ಹಡಗು ಸಿಬ್ಬಂದಿ ನಿರಾಕರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !