ಶನಿವಾರ, ಡಿಸೆಂಬರ್ 14, 2019
25 °C
ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್‌ ಅಭಿಪ್ರಾಯ

ರಾಷ್ಟ್ರಗಳ ಅಸಮರ್ಪಕ ಪ್ರಯತ್ನ: ಹವಾಮಾನ ಸಮ್ಮೇಳನದಲ್ಲಿ ಗುಟೆರಸ್‌ ಅಭಿಪ್ರಾಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ‘ಹವಾಮಾನ ವೈಪರೀತ್ಯ ತಡೆಗೆ ವಿವಿಧ ರಾಷ್ಟ್ರಗಳು ಇಲ್ಲಿಯವರೆಗೂ ನಡೆಸಿದ ಎಲ್ಲ ಪ್ರಯತ್ನಗಳೂ ‘ತೀವ್ರ ಅಸಮರ್ಪಕ’
ವಾಗಿವೆ. ಹಿಂದಕ್ಕೆ ಹೋಗಲು ಸಾಧ್ಯವಾಗದ ಘಟ್ಟಕ್ಕೆ ಜಾಗತಿಕ ತಾಪಮಾನ ತಲುಪಿದೆ’ ಎಂದು ವಿಶ್ವಸಂಸ್ಥೆಯ ಮಹಾ
ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಎಚ್ಚರಿಸಿದ್ದಾರೆ. 

ಸ್ಪೇನ್‌ ರಾಜಧಾನಿ ಮ್ಯಾಡ್ರಿಡ್‌ನಲ್ಲಿನಡೆಯಲಿರುವ ಎರಡು ವಾರಗಳಅಂತರರಾಷ್ಟ್ರೀಯ ಹವಾಮಾನ ಸಮ್ಮೇಳನದ ಉದ್ಘಾಟನಾ ದಿನದಂದು ಮಾತನಾಡಿದ ಗುಟೆರಸ್‌, ‘ಏರುತ್ತಿರುವ ತಾಪಮಾನ, ತೀವ್ರ ಹವಾಮಾನ ವೈಪರೀತ್ಯದ ಪರಿಣಾಮವನ್ನು ಗಮನಿಸುತ್ತಿದ್ದೇವೆ. ಮನುಷ್ಯರು ಸೇರಿದಂತೆ ಪ್ರಾಣಿ ಸಂಕುಲದ ಮೇಲೂ ಇವುಗಳ ಪರಿಣಾಮ ಕಾಣಿಸಿಕೊಳ್ಳುತ್ತಿದೆ’ ಎಂದರು. 

ರಾಜಕೀಯ ಇಚ್ಛಾಶಕ್ತಿ ಕೊರತೆ: ‘ಜಾಗತಿಕ ತಾಪಮಾನವನ್ನು ತಡೆಯಲು ನಮ್ಮಲ್ಲಿ ಎಲ್ಲ ರೀತಿಯ ವೈಜ್ಞಾನಿಕ ಜ್ಞಾನ, ತಾಂತ್ರಿಕತೆ ಇದೆ. ಯುವಜನರೂ ಹವಾಮಾನದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆದರೆ ನಮ್ಮಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಪೆಟ್ರೋಲ್‌, ಡೀಸೆಲ್‌ ಮೇಲೆ ಸಬ್ಸಿಡಿ ಕಡಿತ, ಇಂಗಾಲದ ಉತ್ಪತ್ತಿ ಮೇಲೆ ದಂಡ, 2020ರಿಂದ ಕಲ್ಲಿದ್ದಲು ಬಳಸುವ ಉಷ್ಣ ವಿದ್ಯುತ್‌ ಸ್ಥಾವರ ನಿರ್ಮಾಣ ಸ್ಥಗಿತ ಮುಂತಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ’ ಎಂದರು.  

ಪ್ಯಾರಿಸ್‌ ಒಪ್ಪಂದಕ್ಕೆ ಬದ್ಧ: ಪ್ಯಾರಿಸ್‌ ಒಪ್ಪಂದದಿಂದ ಹೊರಬರುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರದ ಹೊರತಾಗಿಯೂ, ಅಮೆರಿಕದ 14 ಜನ ಸಂಸದೀಯರ ತಂಡ ಸಮ್ಮೇಳನದಲ್ಲಿ ಭಾಗವಹಿಸಿದೆ. ‘ಜಾಗತಿಕ ತಾಪಮಾನದ ವಿರುದ್ಧದ ಹೋರಾಟಕ್ಕೆ ಅಮೆರಿಕ ಜೊತೆ ನೀಡಲಿದೆ. ನಾವಿನ್ನೂ ಒಪ್ಪಂದಕ್ಕೆ ಬದ್ಧರಾಗಿದ್ದೇವೆ’ ಎಂದು ಸಂಸದೀಯ ನಾಯಕ ನ್ಯಾನ್ಸಿ ಪೆಲೊಸಿ ಹೇಳಿದರು. 

ಸಮ್ಮೇಳನದಲ್ಲಿ ಅಮೆರಿಕ, ಚೀನಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳ 50ಕ್ಕೂ ಅಧಿಕ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. 

ಕೈಮೀರಿದ ಜಾಗತಿಕ ತಾಪಮಾನ: ‘ಭೂಮಿಯ ಮೇಲೆ ಮಾನವನಿಂದ ಆಗುತ್ತಿರುವ ದುಷ್ಪರಿಣಾಮಗಳಿಗೆ ಈಗಾಗಲೇ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳಿವೆ. ಹಸಿರುಮನೆ ಅನಿಲದಿಂದ ಮಿತಿಮೀರಿದ ತಾಪಮಾನ, ಉತ್ತರಧ್ರುವದಲ್ಲಿ ಹಿಮಗಡ್ಡೆಗಳು ಕರಗುತ್ತಿವೆ. ಪ್ರಕೃತಿಯ ವಿರುದ್ಧ ಮನುಷ್ಯನಡೆಸುತ್ತಿರುವ ದಾಳಿ ಕೊನೆಯಾಗಬೇಕು. ಇದು ಸಾಧ್ಯ ಇದೆ ಎಂದು ಎಲ್ಲರಿಗೂ ತಿಳಿದಿದೆ. ಪ್ಯಾರಿಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ರಾಷ್ಟ್ರಗಳು ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ ಒಳಗೆ ಮಿತಿಗೊಳಿಸಲು ಒಪ್ಪಿದ್ದವು. ಆದರೆ, ಈಗಾಗಲೇ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು