ಮಂಗಳವಾರ, ಸೆಪ್ಟೆಂಬರ್ 24, 2019
29 °C

ಇನ್ನೊಂದು ತಿಂಗಳು ಬ್ರಿಟನ್‌ ಸಂಸತ್‌ ಅಮಾನತು

Published:
Updated:

ಲಂಡನ್: ಬ್ರಿಟನ್ ಸಂಸತ್‌ ಅನ್ನು ಅಮಾನತಿನಲ್ಲಿಡುವ ಪ್ರಧಾನಿ ಬೋರಿಸ್‌ ಜಾನ್ಸನ್‌ ಆದೇಶ, ಸೋಮವಾರದಿಂದ ಅನ್ವಯವಾಗಿದ್ದು ಇನ್ನೊಂದು ತಿಂಗಳು ಕಾರ್ಯಕಲಾಪಗಳಿರುವುದಿಲ್ಲ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಬ್ರೆಕ್ಸಿಟ್‌ ಪ್ರಕ್ರಿಯೆಗೆ ಸಂಸದರು ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಬೋರಿಸ್‌ ಈ ಆದೇಶ ಮಾಡಿದ್ದರು. ‘ಸೋಮವಾರದ ಕಾರ್ಯಕಲಾಪಗಳು ಮುಗಿದಾಕ್ಷಣವೇ ಕಲಾಪವನ್ನು ಮುಂದೂಡಲಾಗುವುದು’ ಎಂದು ಬೋರಿಸ್‌ ವಕ್ತಾರರೊಬ್ಬರು ತಿಳಿಸಿದರು.

ಬ್ರಿಟನ್‌ ಸಂಸತ್‌ ಅನ್ನು ಅ. 14 ರವರೆಗೆ ಅಮಾನತುಗೊಳಿಸುವ ಪ್ರಸ್ತಾವವನ್ನು ಕಳೆದ ತಿಂಗಳು ಬೋರಿಸ್‌ ಅವರು ರಾಣಿ ಎರಡನೇ ಎಲಿಜಬೆತ್‌ ಮುಂದಿರಿಸಿದ್ದರು. ಇದಕ್ಕೆ ಅನುಮೋದನೆ ದೊರೆತಿತ್ತು.

Post Comments (+)