ಭಾನುವಾರ, ಏಪ್ರಿಲ್ 5, 2020
19 °C

ಭಾರತದೊಂದಿಗೆ ಮಾತುಕತೆ ಬೇಕಿದ್ದರೆ ಉಗ್ರರನ್ನು ಮಟ್ಟಹಾಕಿ: ಪಾಕಿಸ್ತಾನಕ್ಕೆ ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

Donald Trump

ವಾಷಿಂಗ್ಟನ್: ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರನ್ನು ಮಟ್ಟ ಹಾಕಿದರೆ ಮಾತ್ರ ಭಾರತದೊಂದಿಗೆ ಯಶಸ್ವಿ ಮಾತುಕತೆ ಏರ್ಪಡಲು ಸಾಧ್ಯ ಎಂದು ಅಮೆರಿಕ ಹೇಳಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.

ಇದನ್ನೂ ಓದಿ: ಭಾರತದ ಹೊಡೆತ ಬಲು ಜೋರು: ಟ್ರಂಪ್

ಕಾಶ್ಮೀರ ವಿಚಾರದದಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಭಾರತ ಭೇಟಿ ವೇಳೆ ಟ್ರಂಪ್ ಪ್ರಸ್ತಾಪಿಸಲಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಉತ್ತರಿಸಿ, ‘ಭಾರತ–ಪಾಕಿಸ್ತಾನ ನಡುವಣ ಉದ್ವಿಗ್ನತೆಯನ್ನು ಶಮನಗೊಳಿಸಲು ಟ್ರಂಪ್ ಉತ್ತೇಜನ ನೀಡುತ್ತಿದ್ದಾರೆ. ಉಭಯ ರಾಷ್ಟ್ರಗಳು ಭಿನ್ನಾಭಿಪ್ರಾಯ ಬದಿಗಿಟ್ಟು ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಉಭಯ ರಾಷ್ಟ್ರಗಳ (ಭಾರತ–ಪಾಕಿಸ್ತಾನ) ನಡುವಣ ಯಶಸ್ವಿ ಮಾತುಕತೆಗೆ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಪಾಕಿಸ್ತಾನದ ಪ್ರಯತ್ನವೇ ಪ್ರಮುಖ ಅಡಿಗಲ್ಲಾಗಲಿದೆ ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿ ನಾವು ಎದುರುನೋಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Explainer | ಉಗ್ರರ ದಮನಕ್ಕೆ ಪಟ್ಟು: ಪಾಕ್‌ಗೆ ಆರ್ಥಿಕ ಪೆಟ್ಟು

‘ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಶಾಂತಿ, ಸ್ಥಿರತೆ ಕಾಪಾಡುವಂತೆ ಮತ್ತು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುವ ಹೇಳಿಕೆಗಳು, ಕ್ರಮಗಳಿಂದ ದೂರ ಉಳಿಯುವಂತೆ ಎರಡೂ ರಾಷ್ಟ್ರಗಳನ್ನು ಅಧ್ಯಕ್ಷರು ಒತ್ತಾಯಿಸಲಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು