ಮಂಗಳವಾರ, ಸೆಪ್ಟೆಂಬರ್ 24, 2019
28 °C

ಉಗ್ರರ ಪಟ್ಟಿ: ಭಾರತದ ಕ್ರಮಕ್ಕೆ ಅಮೆರಿಕ ಬೆಂಬಲ

Published:
Updated:

ವಾಷಿಂಗ್ಟನ್‌(ಪಿಟಿಐ): ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಸೇರಿದಂತೆ ನಾಲ್ವರನ್ನು ‘ಭಯೋತ್ಪಾದಕರು’ ಎಂದು ಅಧಿಕೃತವಾಗಿ ಘೋಷಿಸಿರುವ ಭಾರತದ ಕ್ರಮಕ್ಕೆ ಅಮೆರಿಕ ಬೆಂಬಲ ಸೂಚಿಸಿದೆ.

ಮುಂಬೈ ದಾಳಿ ಪ್ರಕರಣದ ಆರೋಪಿ ಝಕಿ ಉರ್‌ ರೆಹಮಾನ್‌ ಲಖ್ವಿ, ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂ, ಲಷ್ಕರ್‌ ಎ–ತಯಬಾ ಸಂಸ್ಥಾಪಕ ಹಫೀಜ್‌ ಸಯೀದ್‌ ಮತ್ತು ಮಸೂದ್‌ ಅಜರ್‌ನನ್ನು ಕಾನೂನುಬಾಹಿರ ಚಟುವಟಿಕೆ (ತಡೆ) ತಿದ್ದುಪಡಿ ಕಾಯ್ದೆಯಡಿ ಭಯೋತ್ಪಾದಕರು ಎಂದು ಭಾರತ ಬುಧವಾರ ಘೋಷಿಸಿತ್ತು.

‘ನೂತನ ಕಾಯ್ದೆಯ ಅಡಿಯಲ್ಲಿ ನಾಲ್ವರನ್ನು ‘ಭಯೋತ್ಪಾದಕರು’ ಎಂದು ಘೋಷಿಸಿರುವುದು ಪ್ರಶಂಸನೀಯ. ಇದು ಭಯೋತ್ಪಾದಕರ ವಿರುದ್ಧ ಉಭಯ ದೇಶಗಳು ನಡೆಸುತ್ತಿರುವ ಹೋರಾಟಕ್ಕೆ ಸಹಕಾರಿಯಾಗಲಿದೆ’ ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಆಲಿಸ್‌ ಜಿ ವೆಲ್ಸ್‌ ಟ್ವೀಟ್‌ ಮಾಡಿದ್ದಾರೆ.

Post Comments (+)