ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ಸಾವು

7

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ಸಾವು

Published:
Updated:

ನ್ಯೂಯಾರ್ಕ್‌: ಬ್ಯಾಂಕ್‌ವೊಂದರಲ್ಲಿ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಭಾರತೀಯರೊಬ್ಬರು ಸೇರಿ ಮೂವರು ಸಾವಿಗೀಡಾಗಿದ್ದಾರೆ. 

ಒಹಿಯೊದಲ್ಲಿ ವಾಸವಾಗಿದ್ದ ಪೃಥ್ವಿರಾಜ್‌ ಕಂದೇಪಿ (29) ಗುಂಡಿನ ದಾಳಿಗೆ ತುತ್ತಾದ ಭಾರತೀಯ. ಆಂಧ್ರಪ್ರದೇಶದ ಗುಂಟೂರಿನವರಾದ ಪೃಥ್ವಿರಾಜ್‌, ಸಿನ್ಸಿನ್ನಟಿ ನಗರದ ಫೌಂಟೇನ್‌ ಸ್ಕ್ವೇರ್‌ ಬಳಿಯ ಬ್ಯಾಂಕ್‌ನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಿಸ್ತೂಲು ಹಿಡಿದುಕೊಂಡು ಬ್ಯಾಂಕ್‌ ಪ್ರವೇಶಿಸಿದ ಯುವಕನೊಬ್ಬ ಹಲವು ಸುತ್ತಿನಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿ ಅವನನ್ನು ಸಾಯಿಸಿದ್ದಾರೆ. 

ದಾಳಿ ನಡೆಸಿದ ಯುವಕನಿಗೂ, ನಮಗೂ ಸಂಬಂಧವಿಲ್ಲ. ದಾಳಿಯ ಕಾರಣ ತಿಳಿದಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. 

ಭಾರತಕ್ಕೆ ಶವವನ್ನು ಕಳುಹಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !