ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌19| ಅಮೆರಿಕದಲ್ಲಿ ಅತಿ ಹೆಚ್ಚು ಸಾವು: ಮೃತರ ಸಂಖ್ಯೆ 20,577ಕ್ಕೆ ಏರಿಕೆ

Last Updated 12 ಏಪ್ರಿಲ್ 2020, 2:03 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇಟಲಿಯನ್ನು ಹಿಂದಿಕ್ಕಿದೆ. ಅದರೊಂದಿಗೆ ಅಮೆರಿಕದಲ್ಲಿ ಮಹಾಮಾರಿಗೆ ಜಗತ್ತಿನ ಇತರೆಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚು ಮಂದಿ ಪ್ರಾಣ ತೆತ್ತಂತಾಗಿದೆ.

ಅಮೆರಿಕದಲ್ಲಿ ಈ ವರೆಗೆ 20,577 ಮಂದಿ ಕೋವಿಡ್‌–19 ನಿಂದ ಮೃತಪಟ್ಟಿದ್ದಾರೆ. ಅಲ್ಲಿನ ಸೋಂಕಿತರ ಸಂಖ್ಯೆ ಸದ್ಯ 532,879 ಆಗಿದೆ. ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೆರಿಕ ಜಗತ್ತಿನಲ್ಲೇ ಭಾರಿ ಮುಂದಿದೆ. ಅಲ್ಲಿ ಈ ವರೆಗೆ 30,453 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ವೈರಸ್‌ನಿಂದಾಗಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಈ ವರೆಗೆ ಇಟಲಿ ಮೊದಲಿತ್ತು. ಅಲ್ಲಿ ಈ ವರೆಗೆ 19,468 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಟಲಿಯ ಒಟ್ಟಾರೆ ಸೋಂಕಿತರ ಸಂಖ್ಯೆ 152,271 ಆಗಿದೆ. ಆದರೆ, ಭಾನುವಾರ ಅಮೆರಿಕ ಅದನ್ನು ಮೀರಿದೆ.

ಕೊರೊನಾ ವೈರಸ್‌ನ ಉಗಮ ಸ್ಥಾನ ಚೀನಾದಲ್ಲಿ ಸೋಂಕಿನಿಂದ ಮೃತಪ್ಟವರ ಸಂಖ್ಯೆ 3,339 ಮಾತ್ರ. ಅಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 82,052 ಆಗಿದ್ದು, ಗುಣಮುಖರಾದವರು 77,575 ಮಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT