ಪತ್ರಕರ್ತೆಯ ಬಂಧನ ದೃಢಪಡಿಸಿದ ಅಮೆರಿಕ
ವಾಷಿಂಗ್ಟನ್: ಇರಾನ್‌ನ ಸುದ್ದಿ ವಾಹಿನಿಯ ಪತ್ರಕರ್ತೆ ಮರ್ಜೇ ಹಶೇಮಿ ಅವರ ಬಂಧನವನ್ನು ಅಮೆರಿಕದ ನ್ಯಾಯಾಲಯ ದೃಢಪಡಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮರ್ಜೇ ಅವರ ಸಾಕ್ಷ್ಯ ಅಗತ್ಯವಿದೆ. ಆದರೆ ಆಕೆಯ ವಿರುದ್ಧ ಯಾವುದೇ ಆರೋಪ ಹೊರಿಸಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇರಾನ್‌ನ ಇಂಗ್ಲಿಷ್ ಸುದ್ದಿವಾಹಿನಿ ಪ್ರೆಸ್ ಟಿವಿಯ ವಾರ್ತಾ ವಾಚಕಿಯಾಗಿರುವ ಮರ್ಜೇ, ಮಧ್ಯಪ್ರಾಚ್ಯ ದೇಶಗಳ ಜೊತೆಗಿನ ಅಮೆರಿಕದ ನೀತಿಯನ್ನು ಟೀಕಿಸಿ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದರು.
ಬರಹ ಇಷ್ಟವಾಯಿತೆ?
1
0
1
0
1
0 comments
View All