ಅಮೆರಿಕ: ರಷ್ಯಾದಿಂದ ರಕ್ಷಣಾ ಸಾಮಗ್ರಿ ಖರೀದಿ ನಿರ್ಬಂಧ ತಡೆ ಮಸೂದೆಗೆ ಅಂಗೀಕಾರ

7

ಅಮೆರಿಕ: ರಷ್ಯಾದಿಂದ ರಕ್ಷಣಾ ಸಾಮಗ್ರಿ ಖರೀದಿ ನಿರ್ಬಂಧ ತಡೆ ಮಸೂದೆಗೆ ಅಂಗೀಕಾರ

Published:
Updated:

ವಾಷಿಂಗ್ಟನ್: ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಮಾಡಲು ಇದ್ದ ನಿರ್ಬಂಧವನ್ನು ತೆಗೆದುಹಾಕುವ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ಬಿದ್ದರೆ, ಕಾಯ್ದೆಯಾಗಿ ಜಾರಿಯಾಗಲಿದೆ.

ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಆಕ್ಟ್–2019 (ಎನ್‌ಡಿಎಎ–19) ಕಾಯ್ದೆಯು ಭಾರತಕ್ಕೆ ರಕ್ಷಣಾ ಸಾಮಗ್ರಿ ಖರೀದಿಗೆ ದಾರಿ ಮಾಡಿಕೊಟ್ಟಿದೆ. ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ (ಸಿಎಎಟಿಎಸ್‌ಎ) ಕಾಯ್ದೆಯಡಿ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. 

87–10 ಮತಗಳ ಅಂತರದಿಂದ ಮಸೂದೆ ಅಂಗೀಕಾರಗೊಂಡಿದೆ. ರಷ್ಯಾದ ಎಸ್–400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದು ಭಾರತಕ್ಕೆ ಇನ್ನು ಸುಲಭವಾಗಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಅಧಿಕಾರಿ ಜೋಷುವಾ ವೈಟ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !