ಗ್ರೀನ್‌ ಕಾರ್ಡ್ ಮಿತಿ ತೆರವು ಮಸೂದೆಗೆ ಮತದಾನ

ಶುಕ್ರವಾರ, ಜೂಲೈ 19, 2019
23 °C

ಗ್ರೀನ್‌ ಕಾರ್ಡ್ ಮಿತಿ ತೆರವು ಮಸೂದೆಗೆ ಮತದಾನ

Published:
Updated:

ವಾಷಿಂಗ್ಟನ್: ಪ್ರತಿ ದೇಶಕ್ಕೆ ಗ್ರೀನ್ ಕಾರ್ಡ್ ನೀಡಲು ಇರುವ ಮಿತಿಯನ್ನು ತೆರವುಗೊಳಿಸುವ ಮಸೂದೆಯೊಂದಕ್ಕೆ ಮಂಗಳವಾರ ಜನಪ್ರತಿನಿಧಿಗಳ ಸಭೆಯಲ್ಲಿ ಮತದಾನ ನಡೆದಿದೆ. ‌

‘ಹೆಚ್ಚು ಕೌಶಲವುಳ್ಳ ವಲಸಿಗರ ಕಾಯ್ದೆ’ಗೆ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ 310ಕ್ಕೂ ಹೆಚ್ಚು ಸಂಸದರ ಬೆಂಬಲ ಇದೆ. 435 ಸದಸ್ಯ ಬಲದ ಜನಪ್ರತಿನಿಧಿಗಳ ಸಭೆಯಲ್ಲೂ ಇದು ಅಂಗೀಕಾರವಾಗುವ ಸಂಭವ ಇದೆ. ಆದರೆ ಸೆನೆಟ್‌ನಲ್ಲೂ ಮಸೂದೆ ಅಂಗೀಕಾರವಾಗಬೇಕಾಗುತ್ತದೆ.

ಹಾಗೊಮ್ಮೆ ಅಂಗೀಕಾರವಾದರೆ, ಎಚ್‌1–ಬಿ ವೀಸಾ ಮೇಲೆ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಉದ್ಯೋಗಿಗಳಿಗೆ ನೆರವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !