ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾಗೆ ಟ್ರಂಪ್‌ ಭೇಟಿ

ಕಿಮ್‌ ಜಾಂಗ್‌ ಉನ್‌ ಜತೆ ಮಾತುಕತೆ: ಅಣ್ವಸ್ತ್ರ ಕುರಿತ ಚರ್ಚೆಗೆ ಒಪ್ಪಿಗೆ
Last Updated 30 ಜೂನ್ 2019, 19:46 IST
ಅಕ್ಷರ ಗಾತ್ರ

ಪನ್ಮುಂಜೋಮ್‌: ಉತ್ತರ ಕೊರಿಯಾ ನೆಲದಲ್ಲಿ ಭಾನುವಾರ ಹೆಜ್ಜೆ ಇಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತಿಹಾಸ ಸೃಷ್ಟಿಸಿದರು.

ಅಧಿಕಾರಾವಧಿಯಲ್ಲೇ ಅಮೆರಿಕದ ಅಧ್ಯಕ್ಷರಲ್ಲಿ ಉತ್ತರ ಕೊರಿಯಾಗೆ ಭೇಟಿ ನೀಡಿದವರಲ್ಲಿ ಟ್ರಂಪ್‌ ಮೊದಲಿಗರಾಗಿದ್ದಾರೆ. ನಾಟಕೀಯ ರಾಜತಾಂತ್ರಿಕ ಬೆಳವಣಿಗೆ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರನ್ನು ಉತ್ತರ ಮತ್ತು ದಕ್ಷಿಣ ಕೊರಿಯಾವನ್ನು ವಿಭಜಿಸುವ ಸೇನಾ ರಹಿತ ವಲಯದಲ್ಲಿ ಟ್ರಂಪ್‌ ಭೇಟಿಯಾದರು. ಕೊನೆ ಕ್ಷಣದವರೆಗೆ ಈ ಭೇಟಿ ಅನಿಶ್ಚಿತತೆಯಿಂದ ಕೂಡಿತ್ತು.

ಉತ್ತರ ಕೊರಿಯಾದ ಅಣ್ವಸ್ತ್ರಗಳ ಕುರಿತು ಸಮಾಲೋಚನೆ ನಡೆಸಲು ಉಭಯ ನಾಯಕರು ಈ ಸಂದರ್ಭದಲ್ಲಿ ಒಪ್ಪಿಕೊಂಡರು. ಚರ್ಚೆಗೆ ಕುಳಿತ ಸಂದರ್ಭದಲ್ಲಿ ಇಬ್ಬರು ಹಸ್ತಲಾಘವ ಮಾಡಿದರು. ಇದು ‘ಶಾಂತಿಯ ಹಸ್ತಲಾಘವ. ಹಳೆಯ ಕಹಿ ಘಟನೆಗಳನ್ನು ಮರೆಯಲು ನಾವು ಸಿದ್ಧರಾಗಿದ್ದೇವೆ ಎನ್ನುವುದು ಈಗ ಸಾಬೀತಾಗಿದೆ’ ಎಂದು ಕಿಮ್‌ ಪ್ರತಿಕ್ರಿಯಿಸಿದರು.

‘ಶ್ವೇತ ಭವನಕ್ಕೆ ಭೇಟಿ ನೀಡುವಂತೆ ಕಿಮ್‌ ಅವರನ್ನು ಆಹ್ವಾನಿಸಿದ್ದೇನೆ. ಅವರು ಬಯಸಿದ ಯಾವುದೇ ಸಮ ಯದಲ್ಲಿ ಬರಬಹುದು’ ಎಂದು ಟ್ರಂಪ್‌ ತಿಳಿಸಿದ್ದಾರೆ.

‘ಗಡಿ ರೇಖೆಯಲ್ಲಿ ಹೆಜ್ಜೆ ಇಡುವಂತೆ ತಿಳಿಸುವ ಮೂಲಕ ಗೌರವ ನೀಡಿದ್ದೀರಿ. ರೇಖೆ ಮೇಲೆ ಹೆಜ್ಜೆ ಇಟ್ಟಿದ್ದಕ್ಕೆ ಹೆಮ್ಮೆ ಯಾಯಿತು. ಒಟ್ಟಾರೆ ಇದು ಮಹತ್ವದ ಐತಿಹಾಸಿಕ ದಿನವಾಗಿತ್ತು’ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಸಿಂಗಪುರದಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದರು. ಬಳಿಕ ಫೆಬ್ರುವರಿಯಲ್ಲಿ ವಿಯಟ್ನಾಂನಲ್ಲಿ ಭೇಟಿಯಾಗಿದ್ದರು. ಆದರೂ, ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಯಾಗಿರಲಿಲ್ಲ. ಉತ್ತರ ಕೊರಿಯಾವು ಅಮೆರಿಕದ ನಿಲುವುಗಳನ್ನು ಟೀಕಿಸಿತ್ತು.

ಆದರೆ, ಟ್ರಂಪ್‌ ಮತ್ತು ಕಿಮ್‌ ಪರಸ್ಪರರಿಗೆ ಪತ್ರ ಬರೆದಿದ್ದರು. ಸೇನಾರಹಿತ ವಲಯದಲ್ಲಿ ಭೇಟಿಯಾಗುವ ಆಹ್ವಾನವನ್ನು ಟ್ರಂಪ್‌ ಕಿಮ್‌ ಅವರಿಗೆ ಶನಿವಾರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT