ಭಾನುವಾರ, ಏಪ್ರಿಲ್ 18, 2021
33 °C

ಬಿಸಿಗಾಳಿ: ವಾರಾಂತ್ಯದಲ್ಲಿ ಅಪಾಯದ ಮಟ್ಟಕ್ಕೆ

ಎಪಿ Updated:

ಅಕ್ಷರ ಗಾತ್ರ : | |

ಡೆಟ್ರಾಯಿಟ್‌: ಅಮೆರಿಕದ ಹೆಚ್ಚಿನ ಭಾಗದಲ್ಲಿ ಬಿಸಿಗಾಳಿಯ ಪ್ರಮಾಣ ತೀವ್ರವಾಗಿದ್ದು, ವಾರಾಂತ್ಯದಲ್ಲಿ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.

ಕಟ್ಟಡದಲ್ಲಿ ತಂಪಾಗಿಸುವ ಯಂತ್ರಗಳನ್ನು ಅಳವಡಿಸಲು ಸಿದ್ಧತೆ ನಡೆದಿದ್ದು, ಬಿಸಿಗಾಳಿಯಿಂದ ತಪ್ಪಿಸಿಕೊಳ್ಳಲು ಸಂಬಂಧಿಗಳು
ಹಾಗೂ ನೆರೆ ಮನೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಿಸಿಗಾಳಿ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಇದು ಉಲ್ಬಣಗೊಂಡರೆ ಮಕ್ಕಳು, ಹಿರಿಯ ನಾಗರಿಕರು, ಆಸ್ತಮಾ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಉಸಿರಾಡಲು ಕಷ್ಟವಾಗಲಿದೆ ಎಂದಿದ್ದಾರೆ.

ಇಲ್ಲಿಯವರೆಗೆ ದಾಖಲಾದ ತಾಪಮಾನದ ಸ್ಥಳೀಯ ದಾಖಲೆಗಳು ಶನಿವಾರ ಮುರಿಯುವ ಸಾಧ್ಯತೆ ಇದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.

ಪ್ರತಿ ದಿನವೂ ಬಿಸಿಗಾಳಿಯ ಪ್ರಮಾಣ ದಾಖಲೆ ಮಟ್ಟದಲ್ಲಿ ಇರುವುದಿಲ್ಲ. ರಾತ್ರಿ ವೇಳೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದರೆ, ತಂಪಾಗುವ ಪ್ರಮಾಣ ಹೆಚ್ಚಾಗದಿದ್ದರೆ ಅಪಾಯಕಾರಿ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪೂರ್ವದ ಕೆಲವು ಭಾಗಗಳಲ್ಲಿನ ತಾಪಮಾನವು ರಾತ್ರಿ ವೇಳೆ 80 ಡಿಗ್ರಿಗಿಂತ (26.7 ಸೆಲ್ಸಿಯಸ್) ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.

‘ಈಗ ಬೀಸುತ್ತಿರುವ ಬಿಸಿಗಾಳಿಯು ಕಡಿಮೆ ಅವಧಿಯಲ್ಲಿ ಹೆಚ್ಚು ಅಪಾಯ ಉಂಟು ಮಾಡಲಿದೆ’ ಎಂದು ತಾಪಮಾನ ಅಂದಾಜು ಕೇಂದ್ರದ ಮುಖ್ಯಸ್ಥ ಜಾರ್ಜ್ ಕಾರ್ಬಿನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು