ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆಯ ಪ್ರಶ್ನೆಗೆ ಸಿಡಿಮಿಡಿ; ಸುದ್ದಿಗೋಷ್ಠಿ ಅರ್ಧಕ್ಕೆ ನಿಲ್ಲಿಸಿದ ಟ್ರಂಪ್

Last Updated 12 ಮೇ 2020, 11:49 IST
ಅಕ್ಷರ ಗಾತ್ರ

ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾವೈರಸ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಪತ್ರಕರ್ತೆಯೊಂದಿಗೆವಾಗ್ವಾದ ಮಾಡಿ ಸುದ್ದಿಗೋಷ್ಠಿಯನ್ನು ಅರ್ಧದಲ್ಲೇ ನಿಲ್ಲಿಸಿದ ಘಟನೆ ಸೋಮವಾರ ನಡೆದಿದೆ.

ಅಮೆರಿಕ ಇತರ ದೇಶಗಳಿಗಿಂತಉತ್ತಮವಾಗಿ ಕೊರೊನಾವೈರಸ್ ಸೋಂಕು ಪರೀಕ್ಷೆ ಮಾಡುತ್ತಿದೆ ಎಂದು ಪದೇ ಪದೇ ಒತ್ತಿ ಹೇಳುತ್ತಿದ್ದೀರಲ್ಲಾ? ಪ್ರತಿದಿನ ಅಮೆರಿಕನ್ನರು ವೈರಸ್‌ನಿಂದ ಸಾಯುತ್ತಿರುವಾಗ ಈ ರೀತಿಯ ಪೈಪೋಟಿಯಾಕೆ ?ಎಂದು ಸಿಬಿಎಸ್ ನ್ಯೂಸ್‌ನ ಪತ್ರಕರ್ತೆ ವೈಜಿಯಾ ಜಿಯಾಂಗ್ ಅವರು ಟ್ರಂಪ್‌ ಅವರನ್ನು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಟ್ರಂಪ್, ಜಗತ್ತಿನಾದ್ಯಂತ ಜನರು ಸಾವಿಗೀಡಾಗುತ್ತಿದ್ದಾರೆ. ನೀವು ಇದೇ ಪ್ರಶ್ನೆಯನ್ನು ಚೀನಾದಲ್ಲಿ ಕೇಳಬೇಕು.ನನ್ನಲ್ಲಿ ಕೇಳಬೇಡಿ, ಇದೇ ಪ್ರಶ್ನೆ ಚೀನಾದವರಲ್ಲಿ ಕೇಳಿ ಎಂದಿದ್ದಾರೆ.

ಸರ್, ಇದನ್ನು ನನ್ನಲ್ಲಿಯೇ ಯಾಕೆ ಹೇಳುತ್ತಿದ್ದೀರೀ? ಎಂದು ಜಿಯಾಂಗ್ ಮತ್ತೆ ಪ್ರಶ್ನಿಸಿದ್ದಾರೆ.

ಈ ರೀತಿಯ ಅಸಭ್ಯ ಪ್ರಶ್ನೆಯನ್ನು ಯಾರೇ ಕೇಳಿದರೂ ನಾನು ಹೀಗೆಯೇ ಹೇಳುತ್ತಿದ್ದೆ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ಇನ್ನೊಬ್ಬ ಪತ್ರಕರ್ತರ ಪ್ರಶ್ನೆ ಕೇಳಲು ಸಿದ್ಧತೆ ನಡೆಸುತ್ತಿದಂತೆ ಜಿಯಾಂಗ್, ತನ್ನ ಪ್ರಶ್ನೆಗೆ ಉತ್ತರಿಸಿ ಎಂದು ಪಟ್ಟು ಹಿಡಿದಿದ್ದಾರೆ.ಆಗ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧದಲ್ಲೇ ನಿಲ್ಲಿಸಿ ಶ್ವೇತಭವನಕ್ಕೆ ಮರಳಿದ್ದಾರೆ.

ಇದಾದ ನಂತರ ಟ್ವಿಟರ್‌ನಲ್ಲಿ ಪತ್ರಕರ್ತೆ ಜಿಯಾಂಗ್ ಅವರಿಗೆ ಬೆಂಬಲ ಸೂಚಿಸಿ #StandWithWeijiaJiang ಟ್ರೆಂಡ್ ಆಗಿದೆ.
ಟ್ರಂಪ್ ಜನಾಂಗೀಯ ಸಿಟ್ಟು ತೋರಿಸಿದ್ದನ್ನು ಖಂಡಿಸಿ ನಾನು ಜಿಯಾಂಗ್‌ಗೆ ಬೆಂಬಲ ಸೂಚಿಸುತ್ತಿದ್ದೇನೆಎಂದು 'ಸ್ಟಾರ್ ಟ್ರೆಕ್' ನಟ, ಏಷ್ಯನ್- ಅಮೆರಿಕನ್ ಸಾಮಾಜಿಕ ಹೋರಾಟಗಾರ ಜಾರ್ಜ್ ಟಕೇಯಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT