ಬುಧವಾರ, ಅಕ್ಟೋಬರ್ 16, 2019
21 °C

ಗುಪ್ತಾ ಕುಟುಂಬಕ್ಕೆ ಅಮೆರಿಕ ದಿಗ್ಬಂಧನ

Published:
Updated:

ವಾಷಿಂಗ್ಟನ್‌: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಭಾರತೀಯ ಮೂಲದ ಉದ್ಯಮಿ ಗುಪ್ತಾ ಅವರ ಕುಟುಂಬಕ್ಕೆ ದಿಗ್ಬಂಧನ ವಿಧಿಸಿರುವುದಾಗಿ ಅಮೆರಿಕ ಘೋಷಿಸಿದೆ.  

ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಅಜಯ್ ಗುಪ್ತಾ, ಅತುಲ್ ಗುಪ್ತಾ, ರಾಜೇಶ್ ಗುಪ್ತಾ ಮತ್ತು ಗುಪ್ತಾ ಸಹವರ್ತಿ ಸಲೀಮ್ ಎಸ್ಸಾ ಅವರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸರ್ಕಾರದ ಆಸ್ತಿಗಳ ದುರುಪಯೋಗ, ರಾಜಕೀಯ ಸಂಪರ್ಕಗಳ ದುರ್ಬಳಕೆ, ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳು ಇವರ ಮೇಲಿದೆ. ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಗುಪ್ತಾ ಕುಟುಂಬ ದುಬೈಗೆ ಸ್ಥಳಾಂತರಗೊಂಡಿದೆ. 

Post Comments (+)