ಶುಕ್ರವಾರ, ಆಗಸ್ಟ್ 23, 2019
26 °C

ಮಾಜಿ ಗೂಢಚಾರನ ಹತ್ಯೆ: ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ

Published:
Updated:

ಸಿಡ್ನಿ: ಬ್ರಿಟನ್‌ನಲ್ಲಿ 2018ರಲ್ಲಿ ಮಾಜಿ ಗೂಢಚಾರ ಸರ್ಗೆ ಸ್ಕ್ರಿಪಾಲ್‌ ಮೇಲೆ ನಡೆದ ವಿಷದಾಳಿಗೆ ಸಂಬಂಧಿಸಿದಂತೆ, ರಷ್ಯಾ ಮೇಲೆ ಅಮೆರಿಕ ಶನಿವಾರ ಮತ್ತಷ್ಟು ನಿರ್ಬಂಧ ಹೇರಿದೆ. 

‘ಇನ್ನು ಮುಂದೆ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಿಂದ ರಷ್ಯಾಗೆ ಯಾವುದೇ ರೀತಿಯ ಸಾಲ ಮತ್ತು ಆರ್ಥಿಕ, ತಾಂತ್ರಿಕ ಸಹಾಯ ವಿಸ್ತರಿಸುವುದಕ್ಕೆ ನಮ್ಮ ಸಮ್ಮತಿಯಿಲ್ಲ. ಜತೆಗೆ ರಷ್ಯಾಗೆ ಆರ್ಥಿಕ ಸಹಾಯ ನೀಡುವುದಕ್ಕೆ ಅಮೆರಿಕದ ಬ್ಯಾಂಕ್‌ಗಳಿಗೂ ಮಿತಿ ವಿಧಿಸಲಾಗಿದೆ. ರಷ್ಯಾಗೆ ಸರಕು ಹಾಗೂ ತಂತ್ರಜ್ಞಾನ ರಫ್ತಿಗೂ ಮಿತಿ ಹೇರಲಾಗುವುದು’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮಾರ್ಗನ್‌ ಓರ್ಟಗಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸೋವಿಯತ್‌ ಅಭಿವೃದ್ಧಿಪಡಿಸಿದ್ದ ನೋವಿಚಾಕ್‌ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿ ಕಳೆದ ಮಾರ್ಚ್‌ನಲ್ಲಿ ಸ್ಕ್ರಿಪಾಲ್‌ ಹಾಗೂ ಆತನ ಮಗಳ ಮೇಲೆ ದಾಳಿ ನಡೆಸಲಾಗಿತ್ತು. ಇದಕ್ಕೆ ರಷ್ಯಾದ ಗೂಢಚಾರರೇ ಕಾರಣ ಎನ್ನಲಾಗಿತ್ತು. ನಿರ್ಬಂಧಿತ ರಾಸಾಯನಿಕ ಶಸ್ತ್ರ ಬಳಸಿದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ರಷ್ಯಾದ ಪ್ರತಿನಿಧಿಗಳನ್ನು ಉಚ್ಚಾಟಿಸಲಾಗಿತ್ತು. ದಾಳಿಯಲ್ಲಿ ತನ್ನ ಪಾತ್ರವನ್ನು ರಷ್ಯಾ ನಿರಾಕರಿಸಿತ್ತು.

Post Comments (+)