ಬುಧವಾರ, ಮಾರ್ಚ್ 3, 2021
31 °C

ಚೀನಾದ ಪ್ರಯೋಗಾಲಯದಲ್ಲೇ ವೈರಸ್‌: ಅಮೆರಿಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ‘ಕೊರೊನಾ ವೈರಸ್‌ ಚೀನಾದ‌ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾಗಿದೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ.

‘ಅತ್ಯುನ್ನತ ಗುಣಮಟ್ಟದ ಪ್ರಯೋಗಾಲಯಗಳನ್ನು ಹೊಂದಿರುವ ಚೀನಾ, ಪ್ರಪಂಚಕ್ಕೆ ಸೋಂಕು ತಗುಲಿಸುವ ಇತಿಹಾಸವನ್ನು ಹೊಂದಿದೆ’ ಎಂದು  ಆರೋಪಿಸಿದ್ದಾರೆ.

ವಾಸ್ತವ ಮರೆಮಾಚಿದ ಚೀನಾ– ಗುಪ್ತಚರ ವರದಿ: ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಅಗತ್ಯವಿದ್ದ ವೈದ್ಯಕೀಯ ಸಾಮಗ್ರಿಗಳ ಶೇಖರಣೆಗಾಗಿ ಉದ್ದೇಶ ಪೂರ್ವಕವಾಗಿಯೇ ಕೊರೊನಾ ಸೋಂಕಿನ ದುರಂತದ ತೀವ್ರತೆಯನ್ನು ಚೀನಾ ಮರೆಮಾಚಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ವರದಿ ತಿಳಿಸಿದೆ. 

ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಚೀನಾದ ನಾಯಕರು ಜನವರಿ ಆರಂಭದಲ್ಲೇ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರು ಎಂದು ಮೇ 1 ರಂದು ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (ಡಿಎಚ್‌ಎಸ್‌) ನಾಲ್ಕು ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದೆ ಎನ್ನಲಾಗಿದ್ದು, ಈ ವರದಿಯನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ. ‌‌

ಕೊರೊನಾ ವೈರಸ್‌ನ ಸಾಂಕ್ರಾಮಿಕಗೊಳ್ಳುವ ಗುಣಲಕ್ಷಣಗಳನ್ನು ಚೀನಾ ಜನವರಿ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೂ ತಿಳಿಸಿರಲಿಲ್ಲ. ಜಗತ್ತಿನ ಇತರ ದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳುವುದು, ಮಾಸ್ಕ್‌, ಗೌನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಪ್ರಯತ್ನ ನಡೆಸಿತ್ತು. ಕಳೆದ ಜನವರಿಯಲ್ಲಿ ಚೀನಾದ ಆಮದು, ರಫ್ತು ಪ್ರಮಾಣವೂ ಸಹಜವಾಗಿರಲಿಲ್ಲ. ಆಮದು–ರಫ್ತಿನಲ್ಲಿ ಅದರ ವರ್ತನೆ ಬದಲಾಗಿತ್ತು ಎಂದು ವರದಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು