ಸೋಮವಾರ, ಅಕ್ಟೋಬರ್ 21, 2019
23 °C

ಡ್ರೋನ್‌ ದಾಳಿ: ಸೌದಿಗೆ 3 ಸಾವಿರ ಯೋಧರನ್ನು ಕಳುಹಿಸಿದ ಅಮೆರಿಕ

Published:
Updated:

ವಾಷಿಂಗ್ಟನ್‌: ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್‌ ದಾಳಿ ನಡೆದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 3 ಸಾವಿರ ಯೋಧರನ್ನು ಅಮೆರಿಕ ಅಲ್ಲಿಗೆ ಕಳುಹಿಸಿದೆ. 

ತೈಲ ಘಟಕಗಳ ಮೇಲೆ ನಡೆದ ದಾಳಿಗೆ ಇರಾನ್‌ ಹೊಣೆ ಎಂದು ಅಮೆರಿಕ ಹೇಳಿದೆ. ಇರಾನ್‌ನಲ್ಲಿ ಅಮೆರಿಕದ ವಿಶೇಷ ರಾಯಭಾರಿ ಬ್ರಿಯಾನ್‌ ಹುಕ್‌ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸೇನಾ ಸಿಬ್ಬಂದಿ ಸೌದಿ ಅರೇಬಿಯಾಕ್ಕೆ ತೆರಳಲಿದ್ದಾರೆ’ ಎಂದರು.

‘ರಕ್ಷಣಾ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಮತ್ತು ಇರಾನ್‌ನ ಆಕ್ರಮಣಕಾರಿ ಧೋರಣೆಯನ್ನು ತಡೆಯುವುದಕ್ಕಾಗಿ ಸೌದಿ ಅರೇಬಿಯಾದಲ್ಲಿ ಹೆಚ್ಚುವರಿ ಸೇನೆ ಮತ್ತು ಸೇನಾ ಉಪಕರಣಗಳನ್ನು ಅಳವಡಿಸಲಾಗುವುದು‘ ಎಂದು ಸರ್ಕಾರದ ಕಾರ್ಯದರ್ಶಿ ಮೈಕ್‌ ಪೊಂಪೆಯೊ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Post Comments (+)