ಸೋಮವಾರ, ಏಪ್ರಿಲ್ 6, 2020
19 °C

ಆಫ್ಗನ್‌ನಿಂದ ಸೇನಾಪಡೆ ಹಿಂತೆಗೆದ ಅಮೆರಿಕ

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್: ‘ಆಫ್ಗಾನಿಸ್ತಾನದ ಎರಡು ನೆಲೆಗಳಿಂದ ಮಂಗಳವಾರ ತನ್ನ ಸೇನಾ ಪಡೆಗಳನ್ನು ಅಮೆರಿಕ ಹಿಂತೆಗೆದುಕೊಳ್ಳಲು ಆರಂಭಿಸಿದ್ದು, ತಾಲಿಬಾನ್ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ’ ಅಮೆರಿಕ ಸೇನೆ ಮಂಗಳವಾರ ತಿಳಿಸಿದೆ.

‘ಷರತ್ತುಗಳ ಅನ್ವಯ, ಅಮೆರಿಕ 135 ದಿನಗಳಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು 8,600ಕ್ಕೆ ಇಳಿಸುವ ಪ್ರಕ್ರಿಯೆ ಆರಂಭಿಸಿದೆ’ ಎಂದು ಆಘ್ಗನ್‌ನಲ್ಲಿರುವ ಅಮೆರಿಕದ ಮಿಲಿಟರಿ ವಕ್ತಾರ ಸೋನಿ ಲೆಗ್ಗೆಟ್ ಹೇಳಿಕೆ ನೀಡಿದ್ದಾರೆ. 

ಅಮೆರಿಕ ಮತ್ತು ತಾಲಿಬಾನ್ ಫೆ. 29ರಂದು ಶಾಂತಿ ಒಪ್ಪದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದಿಂದ 18 ವರ್ಷಗಳ ಹಿಂದೆ ಆಫ್ಗನ್‌ನಲ್ಲಿ ನಡೆಯುತ್ತಿರುವ ಯುದ್ಧ ಕೊನೆಗಾಣುವಂತಾಗಿದೆ. ಆಫ್ಗನ್‌ನಲ್ಲಿ ಅಮೆರಿಕ ಪ್ರಸ್ತುತ 13 ಸಾವಿರ ಸೈನಿಕರನ್ನು ಹೊಂದಿದ್ದು, ಶಾಂತಿ ಒಪ್ಪಂದದ ಪ್ರಕಾರ, ಅಮೆರಿಕ  ಜುಲೈ ತಿಂಗಳ ಹೊತ್ತಿಗೆ ಸುಮಾರು 8,600 ಸೈನಿಕರನ್ನು ಕಡಿತಗೊಳಿಸಲಿದೆ. ಒಟ್ಟು 20 ಸೇನಾ ನೆಲೆಗಳ ಪೈಕಿ 5 ನೆಲೆಗಳನ್ನು ಮುಚ್ಚಲಿದೆ. 

ಈ ನಡುವೆ ಆಫ್ಗನ್‌ ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಘನಿ ಅವರ ಭರವಸೆಯನ್ನು ಸ್ವಾಗತಿಸುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯಾ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಆಫ್ಗನ್ ಅಧ್ಯಕ್ಷರಾಗಿ ಅಶ್ರಫ್‌ ಘನಿ ಮತ್ತು ಅಬ್ದುಲ್ಲಾ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕರಿಸಿದ್ದು, ನಾಯಕತ್ವದ ಕುರಿತು ಗೊಂದಲವುಂಟಾಗಿತ್ತು. ಆದರೆ, ಘನಿ ಶಾಂತಿ ಒಪ್ಪಂದ ಕುರಿತು ಮಾತುಕತೆ ನಡೆಸಲು ತಂಡವನ್ನು ಒಗ್ಗೂಡಿಸುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು