ಚಿಕಾಗೋದಲ್ಲಿ ವೆಂಕಯ್ಯನಾಯ್ಡು ಭಾಷಣ

7

ಚಿಕಾಗೋದಲ್ಲಿ ವೆಂಕಯ್ಯನಾಯ್ಡು ಭಾಷಣ

Published:
Updated:

ವಾಷಿಂಗ್ಟನ್‌: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಮೊದಲ ಬಾರಿಗೆ ಚಿಕಾಗೋದಲ್ಲಿ ಭಾಷಣ ಮಾಡಲಿದ್ದಾರೆ. 

1893ರಲ್ಲಿ ಸ್ವಾಮಿ ವಿವೇಕಾನಂದ ಅವರು ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ 125ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  ‌

ಅಮೆರಿಕದ ವಿಶ್ವ ಹಿಂದು ಪರಿಷತ್ತು ನಾಲ್ಕು ವರ್ಷಕ್ಕೊಮ್ಮೆ ವಿಶ್ವ ಹಿಂದು ಕಾಂಗ್ರೆಸ್‌ ಕಾರ್ಯಕ್ರಮ ಆಯೋಜಿಸುತ್ತದೆ.  ಸೆ.7 ರಂದು ಕಾರ್ಯಕ್ರಮ ಪ್ರಾರಂಭವಾಗಿ 9ಕ್ಕೆ ಮುಕ್ತಾಯವಾಗಲಿದೆ. ಕೊನೆಯ ದಿನ ವೆಂಕಯ್ಯನಾಯ್ಡು ಅವರು ಭಾಷಣ ಮಾಡಲಿದ್ದಾರೆ.  

ಈ ಕಾರ್ಯಕ್ರಮದಲ್ಲಿ 80 ದೇಶಗಳ 2,500 ಮಂದಿ ಹಿಂದು ಸಮುದಾಯದವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

‘ವಿವೇಕಾನಂದ ಅವರ ಚಿಂತನೆಗಳ ಪ್ರಸ್ತುತತೆ’ ಮತ್ತು ‘ಜಾಗತಿಕ ಮತ್ತು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಅವರ ಉಪದೇಶ ಎಷ್ಟು ಪರಿಣಾಮಕಾರಿ’ ಎಂಬ ವಿಷಯಗಳ ಕುರಿತು ವೆಂಕಯ್ಯ ನಾಯ್ಡು ಮಾತನಾಡಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !