ಬುಧವಾರ, ಮಾರ್ಚ್ 3, 2021
22 °C

‘ಹೊಸ ವೈರಸ್‌ ಪತ್ತೆಯಾಗಿದೆ...’ ವಿಡಿಯೊ ಮೂಲಕ ಅಮೆರಿಕಕ್ಕೆ ಚೀನಾ ತಿರುಗೇಟು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೊರೊನಾ ವೈರಸ್‌ನ ಉಗಮದ ಕುರಿತಂತೆ ಅಮೆರಿಕ ಈ ವರೆಗೆ ಮಾಡಿರುವ ಎಲ್ಲ ಆರೋಪಗಳಿಗೆ ಚೀನಾ ಕಿರುಚಿತ್ರದ ಮೂಲಕ ವ್ಯಂಗ್ಯಭರಿತ ತಿರುಗೇಟು ನೀಡಿದೆ.  

ಅನಿಮೇಷನ್‌ ತಂತ್ರಜ್ಞಾನದ ಮೂಲಕ ಚೀನಾ ‘ಒನ್ಸ್ ಅಪಾನ್‌ ಎ ವೈರಸ್‌ (Once Upon a Virus)’ ಹೆಸರಲ್ಲಿ  ಒಂದೂವರೆ ನಿಮಿಷದ ಕಿರುಚಿತ್ರವನ್ನು ತಯಾರು ಮಾಡಿದೆ. ಮಾಸ್ಕ್‌ ಧರಿಸಿರುವ ಮಾನವನ ಆಕೃತಿ (ಚೀನಾ) ಮತ್ತು ಅಮೆರಿಕದ ಲಿಬರ್ಟಿ ಪ್ರತಿಮೆಯ ನಡುವೆ ಒಂದೂವರೆ ನಿಮಿಷಗಳ ಕಾಲ ಕುತೂಹಲಕಾರಿ ಸಂಭಾಷಣೆ ನಡೆಯುತ್ತದೆ. ಈ ಸಂಭಾಷಣೆ ಮೂಲಕ ಚೀನಾ ಅಮೆರಿಕದ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿದೆ. 

ಮಾಸ್ಕ್‌ ಧರಿಸಿದ ಆಕೃತಿ ಚೀನಾ ಡಿಸೆಂಬರ್‌ನಲ್ಲಿ ಮೊದಲಿಗೆ,  ‘ನಮಗೆ ಹೊಸ ವೈರಸ್‌ ಪತ್ತೆಯಾಗಿದೆ,’ ಎಂದು ಹೇಳುತ್ತದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಸಂದೇಶವನ್ನು ಗ್ರಹಿಸಿರುವುದಾಗಿ ಹೇಳುತ್ತದೆ. ಆದರೆ, ಮಾಸ್ಕ್‌ ಧರಿಸದ ಅಮೆರಿಕದ ಲಿಬರ್ಟಿ ಪ್ರತಿಮೆಯು ‘ಅದಕ್ಕೇನು?’ ಎಂದು ಉಪೇಕ್ಷೆ ಮಾಡಿ ಪ್ರಶ್ನೆ ಮಾಡುತ್ತದೆ.  ಅದಕ್ಕೆ ಮಾನವನ ಆಕೃತಿಯು ಮಾಸ್ಕ್‌ ಧರಿಸುವಂತೆ ಸಲಹೆ ನೀಡುತ್ತದೆ. ಆದರೆ, ಲಿಬರ್ಟಿ ಪ್ರತಿಮೆ ಅದನ್ನು ಅಲಕ್ಷಿಸುತ್ತದೆ ಮಾತನಾಡುತ್ತದೆ. 

ಮಾರ್ಚ್‌ ಹೊತ್ತಿಗೆ ಚೀನಾ ತನ್ನಲ್ಲಿ ವೈರಸ್‌ ಕಡಿಮೆಯಾಗಿದೆ ಎಂದು ಹೇಳುತ್ತದೆ. ಆದರೆ, ಲಿಬರ್ಟಿ ಪ್ರತಿಮೆ, ’ನೀವು ಜಗತ್ತಿಗೆ ಸುಳ್ಳು ಹೇಳಿದ್ದೀರಿ,’ ಎಂದು ವಾದಿಸುತ್ತದೆ. ಅಷ್ಟೊತ್ತಿಗಾಗಲೇ ಲಿಬರ್ಟಿ ಪ್ರತಿಮೆ ಮುಖಕ್ಕೆ ಮಾಸ್ಕ್‌ ಬಂದಿರುತ್ತದೆ. 

ವಿಡಿಯೊ ವೀಕ್ಷಿಸಿ

ಕೊರೊನಾ ವೈರಸ್‌ನ ಮೂಲ ಚೀನಾದ ವುಹಾನ್‌ ವನ್ಯಜೀವಿಗಳ ಮಾಂಸ ಮಾರುಕಟ್ಟೆಯಲ್ಲ, ವುಹಾನ್‌ ವೈರಾಣು ಲ್ಯಾಬ್‌ ಎಂದು ಅಮೆರಿಕ ಈ ವರೆಗೆ ಆರೋಪಿಸುತ್ತಾ ಬಂದಿದೆ. ಅಲ್ಲದೆ, ವೈರಸ್‌ ಕುರಿತ ಮಾಹಿತಿಯನ್ನು ಚೀನಾ ಅವಿತಿಟ್ಟಿದೆ ಎಂದು ಅಮೆರಿಕ ಆರೋಪಿಸಿದೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಮುಖವಾಣಿ ಎಂಬಂತಾಗಿದೆ ಎಂದು ಆರೋಪಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು