ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಡಬ್ಲ್ಯುಎಚ್‌ಒ ದೇಣಿಗೆ ಸ್ಥಗಿತ ಪ್ರಹಸನ

ಸೋಂಕು ಹರಡುವಿಕೆ ನಿಯಂತ್ರಿಸಲು ಸಂಸ್ಥೆ ವಿಫಲ ಕಾರಣ: ದೇಣಿಗೆ ನಿರಾಕರಿಸಿದ ಅಮೆರಿಕ
Last Updated 16 ಏಪ್ರಿಲ್ 2020, 0:42 IST
ಅಕ್ಷರ ಗಾತ್ರ

ಕೋವಿಡ್–19 ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೋರಾಡುತ್ತಿದೆ. ಹಿಂದುಳಿದ ದೇಶಗಳಲ್ಲಿ ಹರಡಿರುವ ಸೋಂಕನ್ನು ನಿಯಂತ್ರಿಸಲು, ಸೋಂಕು ಹರಡದಂತೆ ತಡೆಗಟ್ಟಲು ಡಬ್ಲ್ಯುಎಚ್‌ಒ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ಸಂದರ್ಭದಲ್ಲಿ, ‘ಕೋವಿಡ್–19 ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಡಬ್ಲ್ಯುಎಚ್‌ಒ ವಿಫಲವಾಗಿದೆ. ಹೀಗಾಗಿ ಅದಕ್ಕೆ ನೀಡಲಿರುವ ದೇಣಿಗೆಯನ್ನು ಸ್ಥಗಿತಗೊಳಿಸಲು ಹೇಳಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂಬ ಕಳವಳ ವ್ಯಕ್ತವಾಗಿದೆ.

ಟೀಕೆಗೆ ಕಾರಣಗಳು

* ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ ಎಂದು ಜನವರಿ 22ರಂದು ಡಬ್ಲ್ಯುಎಚ್‌ಒ ಘೋಷಿಸಿತ್ತು

* ಜನವರಿಯಲ್ಲಿ ಚೀನಾಗೆ ಡಬ್ಲ್ಯುಎಚ್‌ಒ ತಜ್ಞರು ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಲು ಚೀನಾ ಅವಕಾಶ ನೀಡಿರಲಿಲ್ಲ. ಡಬ್ಲ್ಯುಎಚ್‌ಒ ಇದಕ್ಕಾಗಿ ಚೀನಾ ಮೇಲೆ ಒತ್ತಡ ಹೇರಿರಲಿಲ್ಲ

* ಜಾಗತಿಕವಾಗಿ ಸೋಂಕಿತರ ಸಂಖ್ಯೆ 40,000 ದಾಟಿದ ನಂತರವಷ್ಟೇಡಬ್ಲ್ಯುಎಚ್‌ಒ ತಜ್ಞರು ಚೀನಾಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು

ದೇಣಿಗೆ ಸ್ಥಗಿತಕ್ಕೆ ಟ್ರಂಪ್ ಸಮರ್ಥನೆ

* ಕೋವಿಡ್–19 ಹರಡುವಿಕೆಯನ್ನು ತಡೆಗಟ್ಟುವಲ್ಲಿ ಡಬ್ಲ್ಯುಎಚ್‌ಒ ವಿಫಲಾಗಿದೆ. ಇಡೀ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ವುಹಾನ್ ನಗರದಲ್ಲಿ ಸೋಂಕು ಪತ್ತೆಯಾದಾಗಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿತ್ತು

* ಸೋಂಕು ತಗುಲಿದವರು ಮೃತಪಟ್ಟವರ ಬಗ್ಗೆ ಚೀನಾ ತಪ್ಪು ಮಾಹಿತಿ ನೀಡಿದೆ. ಇದರಿಂದ ಸೋಂಕು ವ್ಯಾಪಕವಾಗಿ ಬೇರೆಡೆಗೆ ಹರಡಿತು. ಇದನ್ನು ಪರಿಶೀಲಿಸಿ, ಡಬ್ಲ್ಯುಎಚ್‌ಒ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಚೀನಾವನ್ನು ಪ್ರಶಂಸೆ ಮಾಡಿತು

* ಸೋಂಕನ್ನು ತಡೆಗಟ್ಟಿದ್ದರೆ ವಿಶ್ವದಾದ್ಯಂತ ಲಕ್ಷಾಂತರ ಜನರ ಸಾವನ್ನು ತಡೆಗಟ್ಟಬಹುದಿತ್ತು. ವಿಶ್ವದ ಆರ್ಥಿಕತೆಗೆ ಆಗಿರುವ ಧಕ್ಕೆಯನ್ನು ತಪ್ಪಿಸಬಹುದಿತ್ತು. ಇದರಲ್ಲಿ ಡಬ್ಲ್ಯುಎಚ್‌ಒ ವಿಫಲವಾಗಿದೆ

* ಜನವರಿಯಲ್ಲೇ ವಿಶ್ವದ ಹಲವು ರಾಷ್ಟ್ರಗಳಿಗೆ ಸೋಂಕು ತಗುಲಿದ್ದರೂ, ಮಾರ್ಚ್ 2ನೇ ವಾರದಲ್ಲಿ ‘ಜಾಗತಿಕ ಸೋಂಕು’ ಎಂದು ಘೋಷಣೆ

***

ಡಬ್ಲ್ಯುಎಚ್‌ಒಗೆ ದೇಣಿಗೆ ಸ್ಥಗಿತಮಾಡಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಕೋವಿಡ್–19 ಹರಡದಂತೆ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಈ ಕೆಲಸ ನಿಲ್ಲಿಸಿದರೆ, ಅದನ್ನು ಮಾಡುವ ಬೇರೆ ಯಾವ ಸಂಸ್ಥೆಯೂ ಇಲ್ಲ. ಮೊದಲಿಗಿಂತ ಈಗ ಡಬ್ಲ್ಯುಎಚ್‌ಒ ಅವಶ್ಯಕತೆ ಈಗ ಇದೆ

–ಬಿಲ್‌ ಗೇಟ್ಸ್‌, ಮೈಕ್ರೊಸಾಫ್ಟ್ ಸಂಸ್ಥಾಪಕ

***

ಕೋವಿಡ್–19 ವಿರುದ್ಧದ ಯುದ್ಧವನ್ನು ಗೆಲ್ಲಲು ಡಬ್ಲ್ಯುಎಚ್‌ಒ ಹೋರಾಟದ ಅವಶ್ಯಕತೆ ಇದೆ. ಹೀಗಾಗಿ ಈ ಸಂಸ್ಥೆಯನ್ನು ಎಲ್ಲರೂ ಬೆಂಬಲಿಸಬೇಕು.

-ಆ್ಯಂಟಿನಿಯೊ ಗುಟೆರಸ್, ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ

***

ಬೇರೆಯವರನ್ನು ತೆಗಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿಧಿಯ ಕೊರತೆ ಇರುವ ಡಬ್ಲ್ಯುಎಚ್‌ಗೆ ದೇಣಿಗೆ ನೀಡಬೇಕು. ಲಸಿಕೆ ಕಂಡುಹಿಡಿದು, ಅದನ್ನು ವಿತರಿಸಲು ನೆರವಾಗಬೇಕು.

-ಜರ್ಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT