14 ವರ್ಷ ಕೋಮಾದಲ್ಲಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು!

7

14 ವರ್ಷ ಕೋಮಾದಲ್ಲಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು!

Published:
Updated:

ಅರಿಜೋನಾ: ಹದಿನಾಲ್ಕು ವರ್ಷ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ  ಘಟನೆ ಅಮೆರಿಕದಲ್ಲಿ ನಡೆದಿದೆ. ಕೋಮಾದಲ್ಲಿರುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅರಿಜೋನಾದ ಸ್ಥಳೀಯ ಸುದ್ದಿ ವಾಹಿನಿ ಪ್ರಕಾರ ಕೋಮಾದಲ್ಲಿದ್ದ ಮಹಿಳೆ ಡಿಸೆಂಬರ್ 29ರಂದು ಮಗುವಿಗೆ  ಜನ್ಮ ನೀಡಿದ್ದಾರೆ.

ಅರಿಜೋನಾದಲ್ಲಿರುವ ಚಿಕಿತ್ಸಾ ಕೇಂದ್ರವೊಂದರಲ್ಲಿ ಮಹಿಳೆ ಚಿಕಿತ್ಸೆಯಲ್ಲಿದ್ದರು.  ಆದಾಗ್ಯೂ, ಮಹಿಳೆ ಮಗುವಿಗೆ ಜನ್ಮ ನೀಡುವವೆರೆಗೂ ಆಕೆ ಗರ್ಭಿಣಿಯಾಗಿದ್ದಳು ಎಂಬ ವಿಷಯ ಚಿಕಿತ್ಸಾ ಕೇಂದ್ರದವರಿಗೆ ತಿಳಿದಿರಲಿಲ್ಲ

ಆ ಚಿಕಿತ್ಸಾ ಕೇಂದ್ರದಲ್ಲಿನ ನೌಕರರ ಮೇಲೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದು, ಅಲ್ಲಿನ ಪುರುಷ ನೌಕರರ ಡಿಎನ್‍ಎ ಪತ್ತೆ ಮಾಡಿ ಮಗುವಿನ ಅಪ್ಪ ಯಾರು ಎಂದು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ ಕಥೆಯನ್ನು ನೆನಪಿಸಿದ ಘಟನೆ 
ಅರಿಜೋನಾದಲ್ಲಿ ನಡೆದ ಈ ಘಟನೆ ಪೆಡ್ರೊ ಅಲ್ಮೋದೊವರ್ ನಿರ್ದೇಶನದ ಟಾಕ್ ಟು ಹರ್ ಎಂಬ ಸಿನಿಮಾ ಕಥೆಗೂ ಸಾಮ್ಯತೆ ಇದೆ. ಈ ಸಿನಿಮಾದಲ್ಲಿ ನಾಯಕಿ ಕೋಮಾದಲ್ಲಿದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ಆಮೇಲೆ ಆಕೆಯ ಬದುಕು ಹೇಗೆ ಬದಲಾಗುತ್ತದೆ ಎಂಬುದು ಸಿನಿಮಾ ಕಥೆ.
 

ಬರಹ ಇಷ್ಟವಾಯಿತೆ?

  • 1

    Happy
  • 2

    Amused
  • 0

    Sad
  • 0

    Frustrated
  • 6

    Angry

Comments:

0 comments

Write the first review for this !