ವಿಶ್ವ ಪರಿಸರ ದಿನ | #BeatAirPollution ವಿಶ್ವಸಂಸ್ಥೆ ಘೋಷ ವಾಕ್ಯ ಏಕೆ?

ಶುಕ್ರವಾರ, ಜೂನ್ 21, 2019
24 °C
#ವಾಯುಮಾಲಿನ್ಯ ತಡೆಯಬೇಕು

ವಿಶ್ವ ಪರಿಸರ ದಿನ | #BeatAirPollution ವಿಶ್ವಸಂಸ್ಥೆ ಘೋಷ ವಾಕ್ಯ ಏಕೆ?

Published:
Updated:

ವಿಶ್ವಸಂಸ್ಥೆ(ಪರಿಸರ ವಿಭಾಗ): ನಿತ್ಯ ಬದುಕಿಗೆ ಉಸಿರಾಡುವ ಗಾಳಿ ವಿಷಮಯವಾಗಿದೆ. ಮಲಿನಯುಕ್ತ ಗಾಳಿಯಿಂದ ವಿಶ್ವದೆಲ್ಲೆಡೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ವಾಯು ಮಾಲಿನ್ಯ ತಡೆಯದಿದ್ದರೆ ಮುಂದೆ ಎದುರಾಗಬಹುದಾದ ಅಪಾಯಗಳೇನು? ಈಗ ಎದುರಾಗಿರುವ ಕಷ್ಟಗಳೇನು? ಇವುಗಳಿಂದ ಪಾರಾಗಲು ಏನು ಮಾಡಬೇಕು? ವೈಯಕ್ತಿಕವಾಗಿ ವ್ಯಕ್ತಿಮಟ್ಟದಲ್ಲಿ ಯಾವೆಲ್ಲಾ ಕ್ರಮ ಅನುಸರಿಸಿದರೆ ಪರಿಸರ ಉಳಿವಿಗೆ ಕೊಡುಗೆ ನೀಡಬಹುದು ಎಂಬೆಲ್ಲ ಕುರಿತು ವಿಶ್ವಸಂಸ್ಥೆಯ ಪರಿಸರ ವಿಭಾಗ ಹಲವು ವಿಷಯಗಳ ಮೇಲೆ ಬೆಳಕುಚೆಲ್ಲಿದೆ.

ಪ್ರಸ್ತುತ ವರ್ಷ ವಿಶ್ವಸಂಸ್ಥೆಯು ಈ ದಿನದೊಂದಿಗೆ ಪರಿಸರ ಸ್ನೇಹಿ ಜೀವನವನ್ನು ಪ್ರಾರಂಭಿಸಲು ಜನರನ್ನು ಪ್ರೇರೇಪಿಸುವ ಉದ್ದೇಶ ಹೊಂದಿದೆ. ‘ವಾಯು ಮಾಲಿನ್ಯ ತೊಡೆಯಿರಿ’(#BeatAirPollution) ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿಯಲ್ಲಿ ತೊಡಗಿದೆ.

ವಾಯ ಮಾಲಿನ್ಯ ತಡೆಗೆ ನಿಮ್ಮ ಧ್ವನಿಯನ್ನು ಗಟ್ಟಿಗೊಳಿಸಲು ಮತ್ತು ಕ್ರಮ ಕೈಗೊಕೊಳ್ಳಲು ನಮ್ಮ ಜತೆ ಕೈಜೋಡಿ ಎಂದು ವಿಶ್ವಸಂಸ್ಥೆ ಕರೆ ನೀಡಿದೆ.

ವಿಶ್ವ ಪರಿಸರ ದಿನದ ಅಂಗವಾಗಿ ‘ವಾಯು ಮಾಲಿನ್ಯ ತೊಡೆಯಿರಿ’ ಘೋಷ ವಾಕ್ಯದೊಂದಿಗೆ ಒಡಿಶಾದ ಪುರಿಯ ಸಮುದ್ರ ತೀರದಲ್ಲಿ ಸುದರ್ಶನ್‌ ಪಟ್ನಾಯಕ್‌ ಅವರು ಮರಳು ಶಿಲ್ಪ ರಚಿಸಿದ್ದಾರೆ. ಎಲ್ಲರ ಗಮನ ಸೆಳೆಯುತ್ತಿರುವ ಕಲಾಕೃತಿಯನ್ನು ಅವರು ಟ್ವೀಟ್‌ ಮಾಡಿದ್ದು, ಅದನ್ನು ವಿಶ್ವಸಂಸ್ಥೆಯ ಪರಿಸರ ವಿಭಾಗ ರೀ ಟ್ವೀಟ್‌ ಮಾಡಿದೆ.

ವಾಯು ಮಾಲಿನ್ಯವನ್ನು ತಡೆಯಲು ಪ್ರಮುಖ ಕಾರಣಗಳು

1) ಮಾಲಿನ್ಯಯುಕ್ತ ಗಾಳಿಯು ಆರೋಗ್ಯದ ಮೇಲೆ ತುರ್ತುಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ.

2) ಮಕ್ಕಳು ಹೆಚ್ಚು ಅಪಾಯಕ್ಕೆ ಸಿಲುಕುತ್ತಾರೆ.

3) ಮಾಲಿನ್ಯ ಮತ್ತು ಬಡತನ ಎರಡೂ ನಮ್ಮ ಕೈಯಲ್ಲಿವೆ.

4) ಇಂಧನ ಉಳಿಸಿ ಹೆಚ್ಚಿನ ವೆಚ್ಚಗಳನ್ನು ತಡೆಯಲು.

5) ಗಾಳಿಯನ್ನು ಶುಚಿಗೊಳಿಸುವುದು ಮಾನವನ ಹಕ್ಕು ಮತ್ತು ಕರ್ತವ್ಯಗಳಲ್ಲೊಂದು.

ವಿಶ್ವ ಸಂಸ್ಥೆ ಪರಿಸರ ವಿಭಾಗದ ಬಗ್ಗೆ

ವಿಶ್ವಸಂಸ್ಥೆಯ ಪರಿಸರ ವಿಭಾಗವು ಪರಿಸರ ಕುರಿತು ಪ್ರಮುಖ ಜಾಗತಿಕ ಧ್ವನಿಯಾಗಿದೆ. ಭವಿಷ್ಯದ ಪೀಳಿಗೆಗೆ ಹೋಲಿಸಿದರೆ ರಾಷ್ಟ್ರಗಳ ಮತ್ತು ಅವರ ಜೀವನ ಗುಣಮಟ್ಟವನ್ನು ಸುಧಾರಿಸಲು ಜನರನ್ನು ಪ್ರೇರೇಪಿಸುವ, ಮಾಹಿತಿ ನೀಡುವ ಮತ್ತು ಸಕ್ರಿಯಗೊಳಿಸುವ ಮೂಲಕ ಇದು ಪರಿಸರವನ್ನು ಕಾಳಜಿ ವಹಿಸುವುದರಲ್ಲಿ ನಾಯಕತ್ವವನ್ನು ಮತ್ತು ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ. 

ವಿಶ್ವಸಂಸ್ಥೆ ಪರಿಸರ ವಿಭಾಗವು ಸರ್ಕಾರಗಳು, ಖಾಸಗಿ ವಲಯ, ನಾಗರಿಕ ಸಮಾಜ ಮತ್ತು ವಿಶ್ವಸಂಸ್ಥೆಯ ಇತರ  ಘಟಕಗಳೊಂದಿಗೆ ಮತ್ತು ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.

ಏಷ್ಯಾದಲ್ಲಿ ಶುದ್ಧ ಗಾಳಿಯ ಬಗ್ಗೆ

‘ಕ್ಲೀನ್‌ ಏರ್‌ ಏಷ್ಯಾ’ವು ಅಂತರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯಾಗಿದೆ. ಅದು ಜಾಗತಿಕಮಟ್ಟದಲ್ಲಿ ಏಷ್ಯಾದ ಹೆಚ್ಚು ವಾಸಯೋಗ್ಯ ನಗರಗಳಲ್ಲಿ ಉತ್ತಮ ಗಾಳಿ ಗುಣಮಟ್ಟ ಮತ್ತು ಆರೋಗ್ಯಕರ ಪರಿಸರ ನಿರ್ಮಾಣ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. 

ವಾಯು ಗುಣಮಟ್ಟ, ಸಾರಿಗೆ ಮತ್ತು ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯಗಳು ಮತ್ತು ಶಕ್ತಿಯ ಬಳಕೆಯನ್ನು ಒಳಗೊಳ್ಳುವ ವೈಜ್ಞಾನಿಕಾಧಾರಿತ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಏಷ್ಯಾದಲ್ಲಿನ ಒಂದು ಸಾವಿರಕ್ಕೂ ಹೆಚ್ಚು ನಗರಗಳಲ್ಲಿ ವಾಯುಮಾಲಿನ್ಯ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗಳ ತಡೆಗೆ ಕಾರ್ಯಕ್ರಮ ರೂಪಿಸುತ್ತದೆ.

ವಿಶ್ವ ಪರಿಸರ ದಿನದ ಬಗ್ಗೆ

ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ನಮ್ಮ ಪರಿಸರದ ಏಕೈಕ ದೊಡ್ಡ ಆಚರಣೆಯಾಗಿ ರೂಪಗೊಂಡಿದೆ. ಇದು 1972ರಲ್ಲಿ ಪ್ರಾರಂಭವಾಯಿತು. ಇದು ಪ್ರಪಂಚದಾದ್ಯಂತ ವ್ಯಾಪಕವಾಗಿ ಆಚರಿಸಲಾಗುವ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಒಂದು ಜಾಗತಿಕ ವೇದಿಕೆಯಾಗಲು ಬೆಳೆದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !