ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಭೀತಿ | ಇರಾಕ್‌ ನೆಲದಲ್ಲಿ ಅಮೆರಿಕ ರಾಕೆಟ್ ದಾಳಿ: ಇರಾನ್‌ ಕಮಾಂಡರ್ ಹತ್ಯೆ

Last Updated 3 ಜನವರಿ 2020, 7:17 IST
ಅಕ್ಷರ ಗಾತ್ರ

ಇರಾಕ್‌ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣ ಸಮೀಪ ಶುಕ್ರವಾರ ರಾಕೆಟ್ ದಾಳಿಯಲ್ಲಿ ಇರಾನ್‌ನ ಪ್ರಭಾವಿ ಸೇನಾಧಿಕಾರಿ, ಸಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಇರಾನ್‌ನ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ ಮೇಜರ್ ಜನರಲ್ಖಾಸಿಂ ಸೊಲೆಮನಿ ಸೇರಿ8 ಮಂದಿ ಮೃತಪಟ್ಟಿದ್ದಾರೆ.

ಇರಾಕ್‌ನಅಮೆರಿಕ ರಾಯಭಾರ ಕಚೇರಿಗೆ ನುಗ್ಗಿ ಇರಾನ್ ಬೆಂಬಲಿಗರು ಪ್ರತಿಭಟಿಸಿದ ಕೆಲವೇ ದಿನಗಳ ನಂತರ ಈ ದಾಳಿ ನಡೆದಿದ್ದು ಜಾಗತಿಕ ವಲಯದಲ್ಲಿ ಯುದ್ಧಭೀತಿ ಮೂಡಿಸಿದೆ.

ಅಮೆರಿಕ ಈಗಾಗಲೇ ಇರಾಕ್‌ನಲ್ಲಿರುವ ತನ್ನ ಸೇನಾಪಡೆಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದು, ಕುವೈತ್‌ ನೆಲೆಯಿಂದ ಇರಾಕ್‌ಗೆ 750 ಸೈನಿಕರನ್ನು ರವಾನಿಸಿದೆ.ಮಧ್ಯಪ್ರಾಚ್ಯದ ನೆಲೆಗಳಿಗೆಹೆಚ್ಚುವರಿಯಾಗಿ ಇನ್ನಷ್ಟು ತುಕಡಿಗಳನ್ನು ರವಾನಿಸಲುಸಿದ್ಧತೆ ನಡೆಸಿದೆ ಎಂದು ಅಲ್‌ಜಝೀರಾ ಸುದ್ದಿವಾಹಿನಿಯ ಜಾಲತಾಣ ವರದಿ ಮಾಡಿದೆ.

ಇರಾಕ್ ಸೇನೆಯ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಎಎಫ್‌ಪಿ ಸುದ್ದಿಸಂಸ್ಥೆ, ‘ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ರಾಕೆಟ್‌ ಬಾಂಬ್‌ಗಳು, ಎರಡು ಕಾರುಗಳು ಸ್ಫೋಟಗೊಂಡವು’ ಎಂದಷ್ಟೇ ಹೇಳಿದೆ.

ಎಎಫ್‌ಪಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಇರಾಕ್‌ ರಕ್ಷಣಾ ಇಲಾಖೆ ಅಧಿಕಾರಿಗಳು ‘ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಏಕಿಷ್ಟು ಆತಂಕ

ಇರಾನ್‌ ಸೇನೆಯ ‘ಖದ್‌’ ಪಡೆಯನ್ನು ಇರಾನ್ ಸೇನೆವಿದೇಶಗಳಲ್ಲಿ ಗುಪ್ತಚರ ಚಟುವಟಿಕೆ, ಅಸಾಂಪ್ರದಾಯಿಕ ಸಶಸ್ತ್ರ ಸಂಘರ್ಷ ನಿರ್ವಹಿಸಲೆಂದೇ ರೂಪಿಸಲಾಗಿದೆ. ಈ ಪಡೆಯ ಮುಖ್ಯಸ್ಥರಾಗಿದ್ದವರು ಮೇಜರ್ ಜನರಲ್ ಖಾಸಿಂ ಸೋಲೆಮನಿ.

ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಅಮೆರಿಕದ ಕಟು ಟೀಕಾಕಾರಾಗಿದ್ದ ಸೋಲೆಮನಿ ಜೊತೆಗೆ ಇರಾನ್ ಪರವಾಗಿದ್ದಇರಾಕ್‌ನ ಸಶಸ್ತ್ರ ಸಂಘಟನೆಯ ಕಮಾಂಡರ್ ಅಬು ಮಹ್ದಿ ಅಲ್ ಮುಹದಿಸ್ ಸಹ ಮೃತಪಟ್ಟಿದ್ದಾರೆ.

‘ಈ ದಾಳಿಯನ್ನು ಅಮೆರಿಕ ಸೇನೆಯೇ ನಿರ್ವಹಿಸಿದೆ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಇದು ಐಸಿಸ್ ಉಗ್ರರ ಹಿಡಿತದಿಂದ ಇರಾಕ್–ಸಿರಿಯಾ ಮುಕ್ತವಾದ ನಂತರಮಧ್ಯಪ್ರಾಚ್ಯದಲ್ಲಿ ನಡೆದಿರುವ ಮಹತ್ವದ ಬೆಳವಣಿಗೆ. ಇರಾನ್‌ ಸೇನೆ ಮತ್ತು ಇರಾಕ್‌ ಸೇರಿದಂತೆ ವಿಶ್ವದ ಹಲವೆಡೆ ಇರುವಇರಾನ್ ಪರ ಹೋರಾಟಗಾರರು ಸೋಲೆಮನಿ ಅವರನ್ನು ಗೌರವಿಸುತ್ತಾರೆ.ಈ ಸಾವಿಗೆ ಇರಾನ್ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ’ ಎಂದು ಅಲ್‌ಜಝೀರಾ ಸುದ್ದಿವಾಹಿನಿ ಅಭಿಪ್ರಾಯಪಟ್ಟಿದೆ.

ಅಮೆರಿಕದಲ್ಲಿ ಭಿನ್ನಾಭಿಪ್ರಾಯ

‘ನಿಮಗೆ ಬೇಕು ಎನಿಸಿದಾಗಯುದ್ಧಆರಂಭಿಸಿ, ಅದನ್ನು ಮುಗಿಸುವುದು ಮಾತ್ರ ನಾವೇ’ ಎಂದು ಅಮೆರಿಕಗೆ ಬೆದರಿಕೆ ಹಾಕಿದ್ದ ಇರಾನ್‌ನ ಮೇಜರ್‌ ಜನರಲ್ ಸೋಲೆಮನಿಯನ್ನು ಅಮೆರಿಕ ತನ್ನ ಶತ್ರುಎಂದೇ ಪರಿಗಣಿಸಿತ್ತು. ಆದರೆ ಸೋಲೆಮನಿಯನ್ನು ಅಮೆರಿಕ ಸೇನೆ ಕೊಂದಿರುವ ರೀತಿಗೆ ತವರು ನೆಲದಲ್ಲಿಯೇ ಅಧ್ಯಕ್ಷ ಟ್ರಂಪ್‌ಗೆ ಆಕ್ಷೇಪಗಳು ವ್ಯಕ್ತವಾಗಿವೆ.

ಈ ಕುರಿತು ಟ್ವೀಟ್ ಮಾಡಿರುವ ಸೆನೆಟರ್ ಕ್ರಿಸ್ ಮರ್ಫಿ, ‘ಕಾಂಗ್ರೆಸ್‌ನ (ಸಂಸತ್ತು) ಅಮೋದನೆಯೇ ಇಲ್ಲದೆ ಇರಾನ್‌ನ ಎರಡನೇ ಅತಿದೊಡ್ಡ ಪ್ರಭಾವಿಯನ್ನು ಕೊಂದಿದ್ದು ಸರಿಯೇ? ಮತ್ತೊಂದು ಜಿದ್ದಿನ ಪ್ರಾದೇಶಿಕ ಯುದ್ಧಕ್ಕೆ ಇದು ಮುನ್ನುಡಿಯಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT