ಸೋಮವಾರ, ಸೆಪ್ಟೆಂಬರ್ 23, 2019
24 °C

ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್

Published:
Updated:
Prajavani

ಕ್ವಾಲಾಲಂಪುರ: ಹಿಂದುಗಳು ಹಾಗೂ ಚೀನಿಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಸಂಬಂಧ ಇಸ್ಲಾಂ ಧರ್ಮ ಪ್ರಚಾ ರಕ ಝಾಕಿರ್ ನಾಯ್ಕ್‌ಗೆ ಮಲೇಷ್ಯಾದ ಅಧಿಕಾರಿಗಳು ಸೋಮವಾರ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.

ದೇಶದಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಝಾಕಿರ್ ನಾಯ್ಕ್‌ಗೆ ಅವಕಾಶ ನೀಡುವುದಿಲ್ಲ ಎಂದು ಇದಕ್ಕೂ ಮೊದಲು ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದರು.

ಉದ್ದೇಶಪೂರ್ವಕವಾಗಿ ಶಾಂತಿ ಕದ ಡಿದ ಆರೋಪದಡಿ ನಾಯ್ಕ್ ವಿರುದ್ಧ ಮಲೇಷ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಆ.16ರಂದು ನಾಯ್ಕ್ ಮೊದಲ ಬಾರಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರು.

Post Comments (+)