ಝಾಕೀರ್‌ ನಾಯ್ಕ್ ಭೇಟಿ ಮಾಡಿದ ಮಲೇಷ್ಯಾ ಪ್ರಧಾನಿ

7

ಝಾಕೀರ್‌ ನಾಯ್ಕ್ ಭೇಟಿ ಮಾಡಿದ ಮಲೇಷ್ಯಾ ಪ್ರಧಾನಿ

Published:
Updated:

ಕ್ವಾಲಾಲಂಪುರ (ಪಿಟಿಐ): ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ್‌ ಅವರನ್ನು ಭಾರತಕ್ಕೆ ಗಡೀಪಾರು ಮಾಡದ ತಮ್ಮ ಸರ್ಕಾರದ ನಿರ್ಧಾರವನ್ನು ಮಲೇಷ್ಯಾ ಪ್ರಧಾನಿ ಮಹತಿರ್‌ ಮೊಹಮದ್‌ ಸಮರ್ಥಿಸಿಕೊಂಡಿದ್ದಾರೆ. 

ಝಾಕೀರ್‌ ಅವರನ್ನು ಭಾನುವಾರ ಭೇಟಿ ಮಾಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದ ಹಾಗೂ ದ್ವೇಷಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಝಾಕೀರ್‌ ಅವರನ್ನು ಗಡೀಪಾರು ಮಾಡುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಸರ್ಕಾರ ಅವರನ್ನು ಮಲೇಷ್ಯಾದಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದರು. 

‘ಮಲೇಷ್ಯಾದಲ್ಲಿ ಶಾಶ್ವತವಾಗಿ ನೆಲೆಸಲು ಝಾಕೀರ್‌ಗೆ ಅವಕಾಶ ನೀಡಲಾಗಿದೆ. ಅವರು ಮಲೇಷ್ಯಾ ಕಾನೂನು ಉಲ್ಲಂಘಿಸಿದರೆ ಮಾತ್ರ ಗಡೀಪಾರು ಮಾಡಲು ಯೋಚಿಸಬಹುದು’ ಎಂದರು. 

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !