ಶನಿವಾರ, ಏಪ್ರಿಲ್ 4, 2020
19 °C
ಕಾಳಗಿ ಪಟ್ಟಣ ಪಂಚಾಯಿತಿ: ಕರಡು ಅಧಿಸೂಚನೆ ಪ್ರಕಟ

11 ವಾರ್ಡ್ ರಚನೆ: ಆಕ್ಷೇಪಣೆಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ನೂತನ ಪಟ್ಟಣ ಪಂಚಾಯಿತಿಗೆ ಕ್ಷೇತ್ರ ವಿಂಗಡಣೆ ಮಾಡಿ ಪ್ರಾದೇಶಿಕ ಕ್ಷೇತ್ರ ವ್ಯಾಪ್ತಿಯ ಚತುರ್ ಸೀಮೆಯ ಕರಡು ಅಧಿಸೂಚನೆಯನ್ನು ಇದೇ ತಿಂಗಳ 17ರಂದು ಹೊರಡಿಸಲಾಗಿದ್ದು, ಆಕ್ಷೇಪಣೆಗಳನ್ನು ಏಪ್ರಿಲ್ 7,2020 (ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ) ಒಳಗಾಗಿ ಲಿಖಿತವಾಗಿ ಮತ್ತು ನೇರವಾಗಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸಿ ಸ್ವೀಕೃತಿ ಪಡೆಯಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಹವಾಲು ಮತ್ತು ಆಕ್ಷೇಪಣೆಗಳನ್ನು ಏಪ್ರಿಲ್13, 2020ರಂದು ಇತ್ಯರ್ಥಪಡಿಸಿ, ಆಕ್ಷೇಪಣೆದಾರರಿಗೆ ಸೂಕ್ತ ಮಾಹಿತಿ ನೀಡಿ, ಏಪ್ರಿಲ್16, 2020ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿವರ ಹೀಗಿದೆ: ವಾರ್ಡ್ ನಂ.1ರಲ್ಲಿ ಇಳಿಗೇರ ಗಲ್ಲಿ ಬರಲಿದ್ದು ಪೂರ್ವ ದಿಕ್ಕಿಗೆ ಭರತನೂರ ರಸ್ತೆ, ಪಶ್ಚಿಮಕ್ಕೆ ಬಜಾರ್ ಮುಖ್ಯರಸ್ತೆ, ಉತ್ತರಕ್ಕೆ ಬಸ್ ನಿಲ್ದಾಣ ಮರಗಮ್ಮ ಗುಡಿ, ದಕ್ಷಿಣಕ್ಕೆ ಕಾಳೇಶ್ವರ ಗುಡಿ ಚತುರ್ ಸೀಮೆ ಹೊಂದಿದೆ.

ವಾರ್ಡ್ ನಂ.2ರಲ್ಲಿ ಮಲ್ಲಿಕಾರ್ಜುನ ಗುಡಿ ಏರಿಯಾ ಬರಲಿದ್ದು ಪೂರ್ವಕ್ಕೆ ಬಜಾರ್ ಮುಖ್ಯರಸ್ತೆ, ಪಶ್ಚಿಮಕ್ಕೆ ಹಿರಡ್ಯಾನ ಗುಡಿ (ಬಡಿಗೇರ ಕಟ್ಟೆ), ಉತ್ತರಕ್ಕೆ ಸಾಗರ ಮಾಲ್, ದಕ್ಷಿಣಕ್ಕೆ ಮಹ್ಮದಿ ಮಜೀದ ಕೊನೆಗೊಳ್ಳಲಿದೆ.

ವಾರ್ಡ್ ನಂ.3ರಲ್ಲಿ ಕಾಳಿಕಾದೇವಿ ಗುಡಿ ಏರಿಯಾ ಬರಲಿದ್ದು ಪೂರ್ವಕ್ಕೆ ಪರಮೇಶ್ವರ ಹಳೆ ಮನೆ, ಪಶ್ಚಿಮಕ್ಕೆ ಭೀಮಣ್ಣಾ ಚಂದನಕೇರಿ ಮನೆ, ಉತ್ತರಕ್ಕೆ ಹನುಮಾನ ಮಂದಿರ, ದಕ್ಷಿಣಕ್ಕೆ ಲಾಲಾಹ್ಮದ ಗಾಡಿವಾನ ಮನೆ ಅಂತಿಮವಾಗಲಿದೆ.

ವಾರ್ಡ್ ನಂ.4ರಲ್ಲಿ ಕುರುಬರ ಗಲ್ಲಿ ಒಳಪಡಲಿದ್ದು ಪೂರ್ವಕ್ಕೆ ಮುತ್ಯಾನಕಟ್ಟೆ, ಪಶ್ಚಿಮಕ್ಕೆ ಹಣಾದಿ ಬಂಡಿ ಜಾಡಿ ರಸ್ತೆ, ಉತ್ತರಕ್ಕೆ ಜೈನ ಮಂದಿರ, ದಕ್ಷಿಣಕ್ಕೆ ರೌದ್ರಾವತಿ ನದಿ ಕೊನೆಯಾಗಿದೆ.

ವಾರ್ಡ್ ನಂ.5ರಲ್ಲಿ ಬಸವೇಶ್ವರ ಗುಡಿ ಏರಿಯಾ ಬರಲಿದ್ದು ಪೂರ್ವಕ್ಕೆ ಮಹ್ಮದಿ ಮಜಿದ್, ಪಶ್ಚಿಮಕ್ಕೆ ಹನುಮಾನ ಗುಡಿ, ಉತ್ತರಕ್ಕೆ ಸತೀಶ ಕಮಲಾಪುರ ಮನೆ, ದಕ್ಷಿಣಕ್ಕೆ ಮುತ್ಯಾನಕಟ್ಟೆ ಚತುರ್ ಸೀಮೆ ಹೊಂದಿದೆ.

ವಾರ್ಡ್ ನಂ.6ರಲ್ಲಿ ಬೇಗರ ಗಲ್ಲಿ ಇರಲಿದ್ದು ಪೂರ್ವಕ್ಕೆ ಶಿವಪುತ್ರಪ್ಪ ಸ್ವಾಮಿ ಮನೆ, ಪಶ್ಚಿಮಕ್ಕೆ ಭೀಮರಾಯ ಮಾಲಗತ್ತಿ ಮನೆ, ಉತ್ತರಕ್ಕೆ ಸದ್ಗುರಪ್ಪ ಗುಡಿ ರಸ್ತೆ, ದಕ್ಷಿಣಕ್ಕೆ ಮೈಹಿಬೂಬ ಸುಬಾನಿ ದರ್ಗಾ ಹೊಂದಿದೆ.

ವಾರ್ಡ್ ನಂ.7ರಲ್ಲಿ ರಾಮನಗರ ಪ್ರದೇಶ ಒಳಪಡಲಿದ್ದು ಪೂರ್ವಕ್ಕೆ ಕಾಳಗಿ ಮುಖ್ಯರಸ್ತೆ, ಪಶ್ಚಿಮಕ್ಕೆ ಗೋಟೂರ ಹಣಾದಿ (ಕೆಇಬಿ), ಉತ್ತರಕ್ಕೆ ಕಲಬುರ್ಗಿ ಮುಖ್ಯರಸ್ತೆ, ದಕ್ಷಿಣಕ್ಕೆ ಸದ್ಗುರಪ್ಪ ಗುಡಿ ಇರುತ್ತದೆ.

ವಾರ್ಡ್ ನಂ.8ರಲ್ಲಿ ಪೊಲೀಸ್ ಸ್ಟೇಷನ್ ಏರಿಯಾ ಬರಲಿದ್ದು ಪೂರ್ವಕ್ಕೆ ನಾಲಾ, ಪಶ್ಚಿಮಕ್ಕೆ ಕಾಳಗಿ ಮುಖ್ಯರಸ್ತೆ, ಉತ್ತರಕ್ಕೆ ಸೂಗೂರ ರಸ್ತೆ, ದಕ್ಷಿಣಕ್ಕೆ ಬಸ್ ನಿಲ್ದಾಣ ಕೊನೆಗೊಳ್ಳಲಿದೆ.

ವಾರ್ಡ್ ನಂ.9ರಲ್ಲಿ ಲಚ್ಚುನಾಯಕ ಮತ್ತು ಸುಬ್ಬುನಾಯಕ ತಾಂಡಾ ಇರಲಿದ್ದು ಪೂರ್ವಕ್ಕೆ ಬಾಬಾಸಾಬ ಗುಡ್ಡ, ಪಶ್ಚಿಮಕ್ಕೆ ನಾಮುನಾಯಕ ತಾಂಡಾ ರಸ್ತೆ, ಉತ್ತರಕ್ಕೆ ಗಣೇಶ ಗುಡ್ಡ, ದಕ್ಷಿಣಕ್ಕೆ ಪಲ್ಲವಿ ಧಾಬಾ ಉರ್ದು ಹಾಸ್ಟೆಲ್ ಕೊನೆಯಾಗಿದೆ.

ವಾರ್ಡ್ ನಂ.10ರಲ್ಲಿ ನಾಮುನಾಯಕ ತಾಂಡಾ ಮತ್ತು ಕಿಂಡಿತಾಂಡಾ ಬರಲಿದ್ದು ಪೂರ್ವಕ್ಕೆ ಲಚ್ಚುನಾಯಕ ತಾಂಡಾ ಸರ್ವೆ ನಂಬರ್ ರಸ್ತೆ, ಪಶ್ಚಿಮಕ್ಕೆ ನಾಲಾ ಸರ್ವೆ ನಂಬರ್ ಮತ್ತು ಗುಡ್ಡ, ಉತ್ತರಕ್ಕೆ ಗುಡ್ಡ ಮತ್ತು ಸರ್ವೆ ನಂಬರ್, ದಕ್ಷಿಣಕ್ಕೆ ಕೋಡ್ಲಿ ಮತ್ತು ಸುಗೂರ ಮುಖ್ಯರಸ್ತೆ ಕೊನೆಯಾಗಲಿದೆ.

ವಾರ್ಡ್ ನಂ.11ರಲ್ಲಿ ಕರಿಕಲ್ಲ ಮತ್ತು ದೇವಿಕಲ್ಲ ತಾಂಡಾ ಇರಲಿದ್ದು ಪೂರ್ವಕ್ಕೆ ಲಿಂಗು ಜಾಧವ ಮನೆ ಮತ್ತು ಸರ್ವೆ ನಂಬರ, ಪಶ್ಚಿಮಕ್ಕೆ ದೇವಿಕಲ ತಾಂಡಾ ಮತ್ತು ರಸ್ತೆ, ಉತ್ತರಕ್ಕೆ ಪಾಚಲಗಿ ಗುಡಿಯಿಂದ ಮೀಟ್ಟು ಮನೆ ಕರಿಕಲ್ಲ ತಾಂಡಾ ಹಾಗೂ ದಕ್ಷಿಣಕ್ಕೆ ಹನುಮಾನ ಗುಡಿ ಕೊನೆಗೊಳ್ಳಲಿದೆ.

ವಾರ್ಡ್ ಹೆಚ್ಚಳ

ಕಾಳಗಿ ಪಟ್ಟಣ ಪಂಚಾಯಿತಿ ಈ ಮೊದಲು ಗ್ರಾಮ ಪಂಚಾಯಿತಿಯಾಗಿದ್ದಾಗ ಕಾಳಗಿ ಊರು-5, ಆರು ತಾಂಡಾ ಸೇರಿ-2 ಮತ್ತು ಡೊಣ್ಣೂರ ಗ್ರಾಮ-1 ಹೀಗೆ ಒಟ್ಟು 8 ವಾರ್ಡ್ ಗಳನ್ನು ಒಳಗೊಂಡಿತ್ತು.

ಈಗ ಡೊಣ್ಣೂರ ಬೇರ್ಪಡಿಸಲಾಗಿದ್ದರೂ 3 ವಾರ್ಡ್ ಗಳನ್ನು ಹೆಚ್ಚಿಸಿ ಒಟ್ಟು 11 ವಾರ್ಡ್‌ಗಳನ್ನು ರಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)