ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರನ್ನು ಜೀತಕ್ಕೆ ದೂಡುವ ಪ್ರಯತ್ನ: ಆರೋಪ

Last Updated 25 ಜುಲೈ 2020, 5:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಕಾರ್ಮಿಕರನ್ನು ಜೀತಕ್ಕೆ ದೂಡುವ ಪ್ರಯತ್ನವಾಗಿದೆ’ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಹೇಳಿದೆ.

‘ತಿಂಗಳಿಗೆ ದುಡಿತದ ಅವಧಿಯನ್ನು 75 ಗಂಟೆಗಳಿಂದ 125 ಗಂಟೆಗಳಿಗೆಹೆಚ್ಚಿಸಿರುವುದು ಜೀತ ಪದ್ಧತಿಗೆ ಮರಳಿಸುವ ವಿಧಾನ’ ಎಂದುಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ್ದೂರಿದ್ದಾರೆ.

‘ಕಾರ್ಖಾನೆಗಳಿಗೆ ಬೀಗಮುದ್ರೆ ಘೋಷಿಸುವಾಗ ಕಾರ್ಮಿಕರನ್ನು ವಜಾಗೊಳಿಸಲು ಇದ್ದ ಮಿತಿಯನ್ನು 100 ರಿಂದ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಮಾರುಕಟ್ಟೆ ಕುಸಿತ ಹಾಗೂನಷ್ಟದ ನೆಪ ಹೇಳಿ ಕಾರ್ಖಾನೆ ಮುಚ್ಚಲು ಮುಕ್ತ ಅವಕಾಶ ದೊರೆಯಲಿದೆ. ಕೋವಿಡ್ ಪರಿಸ್ಥಿತಿಯ ದುರ್ಲಾಭ ಪಡೆದು ಕಾರ್ಮಿಕರನ್ನು ಬೀದಿಗೆ ತಳ್ಳಲು ಸರ್ಕಾರವೇ ಪರವಾನಗಿ ನೀಡಿದಂತೆ ಆಗಲಿದೆ’ ಎಂದಿದ್ದಾರೆ.

‘ಹಲವು ವರ್ಷಗಳ ಹೋರಾಟದ ಫಲವಾಗಿ ಗಳಿಸಿದ ಕಾರ್ಮಿಕರ ಪರವಾದ ಕಾನೂನುಗಳಿಗೆ ಸರ್ಕಾರ ತಿದ್ದುಪಡಿ ಮಾಡುತ್ತಿರುವುದರ ವಿರುದ್ಧ ಕಾರ್ಮಿಕ ವರ್ಗ ಸಿಡಿದೇಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT