ಬೆಂಗಳೂರು: ರಾಜ್ಯದಾದ್ಯಂತ ಒಂದು ತಿಂಗಳ (ನಾಲ್ಕು ವಾರಗಳು) ಭಾನುವಾರದ ಲಾಕ್ಡೌನ್ ಆಗಸ್ಟ್ 2ಕ್ಕೆ ಕೊನೆಗೊಳ್ಳಲಿದ್ದು, ಆ ಬಳಿಕ ಮುಂದುವರಿಸಬೇಕೇ ಅಥವಾ ನಿಲ್ಲಿಸಬೇಕೆ ಎಂಬ ಬಗ್ಗೆ ತಜ್ಞರ ಸಮಿತಿ ನಿರ್ಧರಿಸಲಿದೆ.
ಈ ಹಿಂದಿನ ಆದೇಶದ ಪ್ರಕಾರ, ಮುಂದಿನ ಭಾನುವಾರ ಲಾಕ್ಡೌನ್ ಕೊನೆಗೊಳ್ಳಲಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂದಿನ ತೀರ್ಮಾನದ ಬಗ್ಗೆ ಸದ್ಯವೇ ತಜ್ಞರು ಸಭೆ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.