ಭಾನುವಾರ, ಸೆಪ್ಟೆಂಬರ್ 26, 2021
28 °C

Covid-19 Karnataka: ಕೋವಿಡ್: ಮೃತರ ಸಂಖ್ಯೆ 2,055ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಮತ್ತೆ 102 ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 2 ಸಾವಿರದ ಗಡಿ (2,055) ದಾಟಿದೆ. 

ಹೊಸದಾಗಿ ಬೆಂಗಳೂರಿನಲ್ಲಿ 1,898 ಸೇರಿದಂತೆ ರಾಜ್ಯದಲ್ಲಿ 5,536 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕು ಪತ್ತೆಯಾದ ನಂತರ ಮೊದಲ ನಾಲ್ಕು ತಿಂಗಳಲ್ಲಿ (ಜೂ.30ರ ವೇಳೆಗೆ) 15,242 ಮಂದಿ ಸೋಂಕಿತರಾಗಿದ್ದರು. ನಂತರದ 28 ದಿನಗಳಲ್ಲಿ 91,759 ಮಂದಿಗೆ ಸೋಂಕು ಹರಡಿದೆ. ಈ ಅವಧಿಯಲ್ಲಿ ಸೋಂಕಿತ 1,809 ಮಂದಿ ಮೃತಪಟ್ಟಿರುವುದು ಕೂಡ ಖಚಿತಪಟ್ಟಿದೆ. 

ಚೇತರಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಮತ್ತೆ 2,819 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಒಂದೇ ದಿನ ಬಳ್ಳಾರಿಯಲ್ಲಿ 452, ಕಲಬುರ್ಗಿಯಲ್ಲಿ 283, ಬೆಳಗಾವಿಯಲ್ಲಿ 228, ಮೈಸೂರಿನಲ್ಲಿ 220, ತುಮಕೂರಿನಲ್ಲಿ 207, ಕೋಲಾರದಲ್ಲಿ 174, ದಕ್ಷಿಣ ಕನ್ನಡದಲ್ಲಿ 173, ಧಾರವಾಡದಲ್ಲಿ 173 ಹಾಗೂ ವಿಜಯಪುರದಲ್ಲಿ 153 ಸೋಂಕು ದೃಢಪಟ್ಟ ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಕೋವಿಡ್ ಅಂಕಿ–ಅಂಶ

1,07,001 ಒಟ್ಟು ಸೋಂಕಿತರು

ಮಂಗಳವಾರ ದೃಢಪಟ್ಟ ಪ್ರಕರಣಗಳು; 5,536

ಸಕ್ರಿಯ ಪ್ರಕರಣಗಳು; 64,434

ಗುಣಮುಖರಾದವರು; 40,504

ಮಂಗಳವಾರ ಗುಣಮುಖರಾದವರು; 2,819 

ಒಟ್ಟು  ಮೃತಪಟ್ಟವರು; 2,055

ಮಂಗಳವಾರ ದೃಢಪಟ್ಟ ಸಾವು ಪ್ರಕರಣಗಳು; 102 

ಐಸಿಯುನಲ್ಲಿ ಇರುವವರು; 612

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು