ಭಾನುವಾರ, ಆಗಸ್ಟ್ 1, 2021
27 °C

DNP..........ನಬಾರ್ಡ್: ಜಲಾಯನಯನ ಅಭಿವೃದ್ಧಿಗೆ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ (ನಬಾರ್ಡ್) ಸಂಸ್ಥಾಪನಾ ದಿನ ಸೋಮವಾರ ನಡೆಯಿತು. ಈ ಬಾರಿ 'ಜಲಾನಯನ ಪ್ರದೇಶಗಳ ಅಭಿವೃದ್ಧಿ'ಯನ್ನು ಸಂಸ್ಥಾಪನಾ ದಿನದ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದೆ.

ರಾಜ್ಯದಲ್ಲಿರುವ ಶೇ 75ರಷ್ಟು ಬೆಳೆ ಪ್ರದೇಶವು ಮಳೆಯನ್ನೇ ಆಶ್ರಯಿಸಿದೆ. ಈ ಪ್ರದೇಶಗಳಲ್ಲಿನ ರೈತರು ಎದುರಿಸುತ್ತಿರುವ ಅಪಾಯವನ್ನು ತಗ್ಗಿಸಲು ಹೆಚ್ಚಿನ ಜಲಾನಯನ ಯೋಜನೆಗಳ ಅನುಷ್ಠಾನಕ್ಕೆ ನಬಾರ್ಡ್ ಗಮನ ಹರಿಸಲಿದೆ.

ಈವರೆಗೆ ನಬಾರ್ಡ್ ತನ್ನ ಜಲಾನಯನ ಅಭಿವೃದ್ಧಿ ನಿಧಿಯಿಂದ ₹221.89 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರ ಜೊತೆಗೆ 298 ಜಲಾನಯನ ಯೋಜನೆಗಳನ್ನು ಬೆಂಬಲಿಸಿದ್ದು, ಇದರಿಂದ 3.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿರುವ 66,500ಕ್ಕೂ ಹೆಚ್ಚು ಕುಟುಂಬಗಳು ಲಾಭ ಪಡೆದುಕೊಂಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು