ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ರಫೇಲ್‌‌ ಯುದ್ಧ ವಿಮಾನದ ಪೈಲಟ್‌

Last Updated 29 ಜುಲೈ 2020, 14:48 IST
ಅಕ್ಷರ ಗಾತ್ರ

ವಿಜಯಪುರ: ಫ್ರಾನ್ಸ್‌ನಿಂದ ಭಾರತದ ಅಂಬಾಲ ವಾಯುನೆಲೆಗೆ ಬುಧವಾರಬಂದಿಳಿದ ರಫೇಲ್ ಯುದ್ಧ ವಿಮಾನವೊಂದರ ಪೈಲಟ್‌ ಆಗಿ ವಿಜಯಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಾರಥ್ಯ ವಹಿಸಿರುವುದು ವಿಶೇಷವಾಗಿದೆ.

ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌ ಅವರು ರಫೇಲ್‌ ಯುದ್ಧ ವಿಮಾನವನ್ನು 7000 ಕಿ.ಮೀ.ದೂರವನ್ನು ಯಶಸ್ವಿಯಾಗಿಕ್ರಮಿಸಿಬಂದಿರುವುದು ವಿಜಯಪುರ ಸೈನಿಕ ಶಾಲೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಬಿಹಾರ ಮೂಲದ ಅರುಣ್‌ ಕುಮಾರ್‌ ಅವರು 1995ರಿಂದ 2001 ಬ್ಯಾಚಿನ ವಿದ್ಯಾರ್ಥಿಯಾಗಿದ್ದರು. 6ನೇ ತರಗತಿಯಿಂದ ಪಿಯುಸಿ ವರೆಗೆ ಇದೇ ಸೈನಿಕ ಶಾಲೆಯಲ್ಲಿ ಕಲಿತಿದ್ದರು. ಪಿಯುಸಿ ಬಳಿಕ 2002ರಲ್ಲಿ ಎನ್‌ಡಿಎ (ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ) ಸೇರಿದ್ದರು. ಅಲ್ಲಿಂದ ಪೈಲಟ್‌ ಆಗಿ ತರಬೇತಿ ಪಡೆದಿದ್ದರು ಎಂದು ಶಾಲೆಯ ಶಿಕ್ಷಕರು ನೆನಪಿಸಿಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT