ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮೃಗಾಲಯದಲ್ಲಿ ಹುಲಿ ಸಾವು

Last Updated 24 ಜುಲೈ 2020, 13:04 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ‘ಬ್ರಹ್ಮ’ ಹೆಸರಿನ 20 ವರ್ಷ ವಯಸ್ಸಿನ ಗಂಡು ಹುಲಿ ಮೃತಪಟ್ಟಿದೆ.

ಈ ಹುಲಿಯನ್ನು 2008 ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಲ್ಲಿ ಸೆರೆಹಿಡಿದು ಮೃಗಾಲಯಕ್ಕೆ ತರಲಾಗಿತ್ತು. ಯೋಗಗುರು ಬಿ.ಕೆ.ಎಸ್‌ ಅಯ್ಯಂಗಾರ್‌ ಅವರು ಹುಲಿಯನ್ನು ಜೀವನಪರ್ಯಂತ ದತ್ತು ಸ್ವೀಕರಿಸಿದ್ದರು.

‘ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೆ ವಯೋಸಹಜ ಕಾರಣಗಳಿಂದ ಹುಲಿ ಮೃತಪಟ್ಟಿದೆ. ಮೃಗಾಲಯದಲ್ಲಿ ಈಗ 10 ಗಂಡು ಹಾಗೂ ಆರು ಹೆಣ್ಣು ಹುಲಿಗಳು ಇವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT