ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪರ ಜನರಿಗೆ ಒಲವು ಹೆಚ್ಚಾಗಿದೆ: ಪ್ರಧಾನಿ ಮೋದಿ

Last Updated 11 ಏಪ್ರಿಲ್ 2019, 13:27 IST
ಅಕ್ಷರ ಗಾತ್ರ

ಸಿಲ್ಚಾರ್‌: ದಕ್ಷಿಣ ಅಸ್ಸಾಂನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಮ್ಮ ಪರ ಜನರ ಒಲವು ಹೆಚ್ಚಾಗಿದೆ. ರ‍್ಯಾಲಿಗೆ ಬಂದು ಸೇರುವ ಜನರಿಂದಲೇ ದೇಶದ ಜನರ ಅನಿಸಿಕೆ ಏನು ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.

ಜನರು ಈಗಾಗಲೇ ತಮ್ಮ ಮನಸ್ಸಿನಲ್ಲಿ ನಿರ್ಧರಿಸಿಯಾಗಿದೆ.ವಿಪಕ್ಷಗಳಿಗೆ ಇಲ್ಲಿ ಅವಕಾಶವೇ ಉಳಿದಿಲ್ಲ.ಅಸ್ಸಾಂನಲ್ಲಿ 5 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಈ ಐದು ಕ್ಷೇತ್ರಗಳಲ್ಲಿಯೂ ಎನ್‍ಡಿಎ ವಿಜಯಭೇರಿ ಬಾರಿಸಲಿದೆ. ಭಾರತ ಯಾವ ದಿಶೆಯತ್ತ ಇದೆ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ ಎಂದಿದ್ದಾರೆ ಮೋದಿ.

ನಾನು ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಯನ್ನು ತರಲು ಬದ್ಧರಾಗಿದ್ದು, ಇದು ಅಸ್ಸಾಂ ಜನರ ಮೇಲೆ ಪ್ರಭಾವ ಬೀರುವುದಿಲ್ಲ. ಈ ವಿಷಯವನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಲಾಗಿದೆ. ಅಸ್ಸಾಂ ಮತ್ತು ಈಶಾನ್ಯ ರಾಜ್ಯದ ಜನರು ತಮ್ಮ ಅಸ್ಮಿತೆಗಾಗಿ ಹೇಗೆ ಹೋರಾಡುತ್ತಿದ್ದರು ಎಂಬುದು ನೆನಪಿದೆ.ಕಾಂಗ್ರೆಸ್ ನುಸುಳುಕೋರರನ್ನು ವೋಟ್ ಬ್ಯಾಂಕ್ ಆಗಿ ಬಳಸಿ ಅಧಿಕಾರಕ್ಕೆ ಬಂದಿದೆ.

ಬಾಂಗ್ಲಾದೇಶದೊಂದಿಗಿನ ಸಮಸ್ಯೆಯನ್ನು ತಿಳಿದೂ ತಿಳಿದು ಅವರುಹಾಗೆಯೇ ಉಳಿಸಿಕೊಂಡರು. ಕಾಂಗ್ರೆಸ್ ಅದನ್ನು ಪರಿಹರಿಸಲು ಪ್ರಯತ್ನಿಸಲೇಇಲ್ಲ.ಈ ಸಮಯದಲ್ಲಿ ನುಸುಳುಕೋರರು ಭಾರತದೊಳಗೆ ಬರುತ್ತಲೇ ಇದ್ದರು,.ನಿಮ್ಮ ಹಕ್ಕುಗಳಿಗೆ ಅಲ್ಲಿ ಸಮಸ್ಯೆಯಾಯಿತು, ಕಾಂಗ್ರೆಸ್‍ಗೆ ಇದರಿಂದ ಲಾಭವಾಯಿತು ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT